ಮಂಜೇಶ್ವರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆದುರಾಗಿ ಹೊಸಂಗಡಿ ಪೋಸ್ಟ್ ಆಫೀಸ್ ಮುಂದೆ ಸಿ.ಐ.ಟಿ.ಯು ಧರಣಿ ನಡೆಸಿದೆ. ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಉದ್ಘಾಟಿಸಿ ಕೇಂದ್ರ ಸರ್ಕಾರ ಪಶ್ಚಿಮ ಏಷ್ಯಾ ಯುದ್ದದ ಕಾರಣ ನೀಡಿ ಬಂಡವಾಳ ಶಾಹಿಗಳಿಗೆ ದೇಶದ ಬಡಜನತೆಯನ್ನೂ ಕೊಳ್ಳೆ ಒಡೆಯಲು ಲೈಸೆನ್ಸ್ ಕೊಟ್ಟಂತಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಗೊಳಿಸಲು ಮುಂದಾಗಬೇಕು ಎಂದರು. ಚಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಏಲಿಯಾಣ, ರಾಬರ್ಟ್ ಡಿಸೋಜ, ಬಾಬು ವಾದ್ಯಪಡ್ಪು, ಉದಯ ಸಿ.ಎಚ್., ರವೀಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ನೇತೃತ್ವ ನೀಡಿದರು. ಪ್ರಶಾಂತ್ ಕನಿಲ ಸ್ವಾಗತಿಸಿದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ವಿರುದ್ಧ ಸಿಐಟಿಯುನಿಂದ ಹೊಸಂಗಡಿ ಅಂಚೆಕಚೇರಿ ಮುಂದೆ ಧರಣಿ
0
ಜೂನ್ 10, 2026

Tags

.jpg)