HEALTH TIPS

ಅಜ್ಜ ಮಾತ್ರೆ ಸೇವಿಸಲು ನೆನಪು ಮಾಡುವ ಎಐ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 18ರ ಯುವಕ

 ಚೀನಾದ 18ರ ಯುವಕ ಮಾಕೈ, ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಗೆ, ಸೂಕ್ತ ಸಮಯಕ್ಕೆ ಔಷಧ ಸೇವಿಸಲು ನೆನಪು ಮಾಡುವ ಹೊಸ ಮೊಬೈಲ್‌ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಅಜ್ಜ ಮಾತ್ರೆ ಸೇವಿಸಲು ನೆನಪು ಮಾಡಲು ಎಐ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 18ರ ಯುವಕ


ಒಂದು ಸಾಲಿನಲ್ಲಿಚೀನಾದ 18ರ ಯುವಕ ಮಾಕೈ, ತಮ್ಮ ಅಜ್ಜನಿಗಾಗಿ ನಿಗದಿತ ಸಮಯದಲ್ಲಿ ಔಷಧ ಸೇವನೆಯನ್ನು ನೆನಪಿಸುವ ಕೃತಕ ಬುದ್ಧಿಮತ್ತೆ (ಂI) ಆಧಾರಿತ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.

ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದವರು ಯಾರು?

 18 ವರ್ಷದ ಯುವಕ ಮಾಕೈ ಈ ವಿಶಿಷ್ಟ ಎಐ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಆವಿಷ್ಕಾರದ ಹಿಂದಿರುವ ಮುಖ್ಯ ಕಾರಣವೇನು?

ಮಾಕೈ ಅವರ ಅಜ್ಜ ವಯಸ್ಸಿನ ಕಾರಣದಿಂದಾಗಿ ಮತ್ತು ಅನಾರೋಗ್ಯದಿಂದಾಗಿ ಸಮಯಕ್ಕೆ ಸರಿಯಾಗಿ ಮಾತ್ರೆ ಸೇವಿಸಲು ಮರೆತುಬಿಡುತ್ತಿದ್ದರು. ಅವರ ಆರೋಗ್ಯದ ಹಿತದೃಷ್ಟಿಯಿಂದ ಈ ತಂತ್ರಜ್ಞಾನವನ್ನು ಸಿದ್ಧಪಡಿಸಲಾಗಿದೆ.

ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ?

ಬಳಕೆದಾರರು ಔಷಧದ ಬಾಟಲಿಯ ಫೋಟೋವನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿದರೆ, ಅದು ನಿಗದಿತ ಸಮಯದಲ್ಲಿ ಔಷಧ ಸೇವಿಸಲು ನೆನಪಿಸುತ್ತದೆ ಮತ್ತು ಔಷಧದ ಬಳಕೆಯ ಅವಧಿ ಮುಗಿದಾಗ ಎಚ್ಚರಿಕೆ ನೀಡುತ್ತದೆ.

ಈ ಅಪ್ಲಿಕೇಶನ್ ಅನ್ನು ಎಲ್ಲಿ ಪ್ರದರ್ಶಿಸಲಾಯಿತು?

ಚೀನಾದಲ್ಲಿ ಜುಲೈ 17 ರಿಂದ 20 ರವರೆಗೆ ನಡೆದ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ (WಂIಅ) ಮಾಕೈ ಅವರು ತಮ್ಮ ಅಪ್ಲಿಕೇಶನ್ ಅನ್ನು ಪ್ರದರ್ಶಿಸಿದರು.

ಈ ತಂತ್ರಜ್ಞಾನದ ತಾಂತ್ರಿಕ ಹಿನ್ನೆಲೆ ಏನು?

ಈ ಅಪ್ಲಿಕೇಶನ್ ಬೀಜಿಂಗ್ ಮೂಲದ ಎಐ ಕಂಪನಿ ಮಿನಿಸಿಪಿಎಂ ಅಭಿವೃದ್ಧಿಪಡಿಸಿದ 'ಮಾಡಲ್‌ಬೆಸ್ಟ್' ಎಂಬ ಎಲ್‌ಎಲ್‌ಎಂ (LLM) ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ.

18ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಯುವಕನ ವಯಸ್ಸುಜುಲೈ 17ರಿಂದ 20ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನ ನಡೆದ ದಿನಾಂಕ70ಅಜ್ಜನ ವಯಸ್ಸು

ಮಾಕೈ, ಅವರ ಅಜ್ಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ವಯಸ್ಸಾದ ಕಾರಣ ಯಾವ ಔಷಧವನ್ನು ಯಾವಾಗ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ಮರೆತು ಹೋಗುತ್ತಿದ್ದರು. ಇದಕ್ಕೆ ಪರಿಹಾರವಾಗಿ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನೊಂದಿಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಜುಲೈ 17ರಿಂದ 20ರ ನಡುವೆ ಚೀನಾದಲ್ಲಿ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನ (WಂIಅ) ನಡೆಯಿತು. ಇದರಲ್ಲಿ ಮಾಕೈ ಕೂಡ ಭಾಗಿಯಾಗಿದ್ದರು. ಮಾತ್ರವಲ್ಲದೆ, ಈ ಸಮ್ಮೇಳನದಲ್ಲಿ ತಾವು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಅನ್ನು ಪ್ರದರ್ಶಿಸಿದ್ದರು.

'ಚೀನಾದ ಬೀಜಿಂಗ್ ಮೂಲದ ಎಐ ಕಂಪನಿ ಮಿನಿಸಿಪಿಎಂ ಅಭಿವೃದ್ಧಿಪಡಿಸಿದ ಮಾಡೆಲ್‌ಬೆಸ್ಟ್ ಎಂಬ ಎಲ್‌ಎಲ್‌ಎಂ ಬಳಸಿಕೊಂಡು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನೊಂದಿಗೆ ಮಾತನಾಡಿರುವ ಮಾಕೈ, 'ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲಿ ಕೆಲಸ ಮಾಡುವ ಪರಿಣಿತರು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಾರೆ ಎಂದು ನನಗೆ ತಿಳಿಯಿತು. ನಾನು ಅವರಿಗೆ ಪ್ರಶ್ನೆಗಳನ್ನು ಕೇಳಲು ಸಮ್ಮೇಳನಕ್ಕೆ ಆಗಮಿಸಿದ್ದೇನೆ. ಅಪ್ಲಿಕೇಶನ್ ಇನ್ನೂ ಆರಂಭಿಕ ಹಂತದಲ್ಲಿದೆ' ಎಂದು ಹೇಳಿದ್ದಾರೆ.

ಅಪ್ಲಿಕೇಶನ್‌ನ ವೈಶಿಷ್ಯಗಳ ಬಗ್ಗೆ ಹೇಳಿಕೊಂಡಿರುವ ಅವರು, ' ಔಷಧ ಬಾಟಲಿಯ ಫೋಟೊವನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬೇಕು. ನಂತರ ಅದರ ಬಳಕೆಯ ಅವಧಿ ಮುಗಿದರೆ, ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಮಾತ್ರವಲ್ಲದೆ ಇನ್ನು ಹಲವು ವೈಶಿಷ್ಯಗಳಿಂದ ಕೂಡಿದೆ. ನನ್ನ ಅಜ್ಜನಿಗಾಗಿಯೇ ಇದನ್ನು ಅಭಿವೃದ್ಧಿಪಡಿಸಿದೆ' ಎಂದು ಹೇಳಿಕೊಂಡಿದ್ದಾರೆ.

'ನಮ್ಮ ಅಜ್ಜನಿಗೆ 70 ವರ್ಷ ವಯಸ್ಸಾಗಿದೆ. ಅವರು ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲವೇಳೆ ಅವರು ಯಾವ ಮಾತ್ರೆಯನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ಮರೆತು ಬಿಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ನನ್ನ ಅಜ್ಜನಿಗೆ ಅವರ ಔಷಧ ಸೇವಿಸುವ ವೇಳಾಪಟ್ಟಿಯನ್ನು ನೆನಪಿಸಲು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ' ಎಂದು ಹೇಳಿದ್ದಾರೆ.

ಸದ್ಯ ಈ ಯುವಕನ ಆವಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಎಐ ಜಗತ್ತನ್ನು ಬದಲಿಸುವುದು ಮಾತ್ರವಲ್ಲದೆ, ಕುಟುಂಬವನ್ನು ಸಹ ರಕ್ಷಿಸುತ್ತದೆ. ಒಳ್ಳೆಯ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದೀರಿ' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಮೆಂಟ್ ಹಾಕಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries