HEALTH TIPS

ಈಜಿಪ್ಟ್‌ ಬಂದರಿನಲ್ಲಿ ಸ್ಫೋಟ : ಅಮೆರಿಕ ಒಡೆತನದ ಟ್ಯಾಂಕರ್‌ಗೆ ಬೆಂಕಿ

ಕೈರೊ:  ಮೆಡಿಟರೇನಿಯನ್ ಕರಾವಳಿಯಲ್ಲಿರುವ ಈಜಿಪ್ಟ್‌ನ ಡಾಮಿಯೆಟ್ಟಾ ಬಂದರಿನಲ್ಲಿ ಸಂಭವಿಸಿದ ಡ್ರೋನ್ ದಾಳಿ ಎಂದು ಶಂಕಿಸಲಾದ ಸ್ಫೋಟದ ನಂತರ, ಅಮೆರಿಕ ಒಡೆತನದ ನೈಸರ್ಗಿಕ ಅನಿಲ ಸಂಗ್ರಹಣಾ ಟ್ಯಾಂಕರ್ ಸೇರಿದಂತೆ ಎರಡು ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. 


ಈ ಸ್ಫೋಟಕ್ಕೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ ಹಾಗೂ ತನಿಖೆ ಮುಂದುವರಿದಿದೆ.

ಅಮೆರಿಕ ಮೂಲದ ಎನರ್ಗೋಸ್ ಇನ್‍ಫ್ರಾಸ್ಟ್ರಕ್ಚರ್ ಒಡೆತನದ `ಎನರ್ಗೋಸ್ ವಿಂಟರ್' ಮತ್ತು ಗ್ರೀಕ್ ಶಿಪ್ಪಿಂಗ್ ಕಂಪೆನಿ ನಿರ್ವಹಿಸುವ `ಗ್ಯಾಸ್‍ಲಾಗ್ ಸೇಲಮ್' ಎಂಬ ಎಲ್‍ಎನ್‍ಜಿ ಕ್ಯಾರಿಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ ಒಂದು ಹಡಗಿಗೆ ಡ್ರೋನ್ ಅಪ್ಪಳಿಸಿದೆ ಎಂದು ಸಾಗರ ಗುಪ್ತಚರ ಸಂಸ್ಥೆ `ಆಂಬ್ರೆ' ತಿಳಿಸಿದೆ.

ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಬೆಂಕಿಯನ್ನು ಹತೋಟಿಗೆ ತಂದ ನಂತರ ಎರಡೂ ಹಡಗುಗಳನ್ನು ಬಂದರಿನಿಂದ ದೂರ ಸರಿಸಲಾಯಿತು ಎಂದು ಈಜಿಪ್ಟ್‌ನ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಈ ಘಟನೆಯ ಕುರಿತು ತಮಗೆ ಮಾಹಿತಿ ನೀಡಲಾಗಿದೆ. ಇದಕ್ಕೆ ಇರಾನ್ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು ಅಮೆರಿಕ ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries