ಕಾಸರಗೋಡು: ದುಬೈ ನಮ್ಮವರು ವಿಶ್ವಕರ್ಮ ಸಮಿತಿಯ ವಾರ್ಷಿಕೋತ್ಸವ ಓಣಂ ಹಬ್ಬದ ಆಚರಣೆಯೊಂದಿಗೆ ವರುಣ್ ಆಚಾರ್ಯ ಬಜಕೂಡ್ಲು ಅವರ ಶಾರ್ಜಾದ ನಿವಾಸದಲ್ಲಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಓಣಂ ಭೋಜನ, ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳು ಜರುಗಿತು. ಸದಸ್ಯರು ಹಾಗೂ ಅವರ ಕುಟುಂಬಸ್ಥರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಮಿತಿಯ ಅಧ್ಯಕ್ಷ ಮಿಥುನ್ ಆಚಾರ್ಯ ಕುಂಬಳೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಗೌರವಾಧ್ಯಕ್ಷರಾದ ವರುಣ್ ಆಚಾರ್ಯ ಬಜಕೂಡ್ಲು, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ ಮೂವಾಜೆ, ಕಾರ್ಯದರ್ಶಿ ಮಹೇಶ್ ಆಚಾರ್ಯ ಕಲ್ಪಾರೆ ಹಾಗೂ ಕೋಶಾಧಿಕಾರಿ ಜಾನೇಶ್ ಆಚಾರ್ಯ ಮಾಯಿಪ್ಪಾಡಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸತ್ಯನಾರಾಯಣ ಆಚಾರ್ಯ ಎಡನೀರು ಕಾರ್ಯಕ್ರಮ ನಿರೂಪಿಸಿದರು.


