ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿ ಮತ್ತು ಮಂಜೇಶ್ವರ ಬಿ.ಆರ್.ಸಿ ವತಿಯಿಂದ ವಿಶೇಷಚೇತನ ಮಕ್ಕಳಿಗಾಗಿ ಹಮ್ಮಿಕೊಂಡ ಓಣಂ ಆಚರಣೆ ಪ್ರೀತಿ ಮತ್ತು ಸೌಹಾರ್ದತೆಯ ಸಂಭ್ರಮವಾಯಿತು. ಮಾವೇಲಿ ಮಹಾರಾಜನನ್ನು ಸ್ವಾಗತಿಸಿ ಮಕ್ಕಳು, ಶಿಕ್ಷಕರು ಮತ್ತು ಪೋಷಕರು ಆಚರಣೆಯಲ್ಲಿ ಸಂಭ್ರಮಿಸಿದರು.
ಉಪ್ಪಳ ಹಬ್ ನಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಮಂಜೇಶ್ವರ ಎ.ಇ.ಒ ನಾರಾಯಣ ಡಿ. ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ತಹಶೀಲ್ದಾರ್ ಸುಬೈರ್, ಎಸ್ .ಕೆ.ಎಸ್.ಎಸ್.ಕೆ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಚರಿಷ್ಮ ಸಿನ, ಡಯಟ್ ಫ್ಯಾಕಲ್ಟಿ ಡಾ. ಸಿದ್ದಿಕ್ ಅಸ್ಲಂ, ಮುಳಿಂಜ ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಮನೋಜ್ ಕುಮಾರ್ ಪಳ್ಳಿಕ್ಕೆರೆ, ಉಪ್ಪಳ ಹಬ್ ಗೌನರ್ ಫಾರೂಕ್ ದಿಡುಮ್ಮ, ಇಸ್ಮಾಯಿಲ್ ಪಿ, ಪ್ರವೀಣ್ ಪೂಂಗೋಡ್, ಮಾಜಿ ಎ.ಇ.ಒ ಜಾರ್ಜ್ ಕ್ರಾಸ್ತ ಅವರು ಶುಭ ಹಾರೈಸಿದರು.
ಮಕ್ಕಳ ಕಲಾ ಪ್ರದರ್ಶನ, ಓಣಂ ಪೂಕಳಂ, ಶಿಕ್ಷಕರ ತಿರುವಾದಿರ ನೃತ್ಯ, ಮಾವೇಲಿ ಸ್ವಾಗತ, ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ ಮತ್ತು ಓಣಂ ಸದ್ಯಗಳು ನಡೆಯಿತು. ಮಕ್ಕಳ ಪ್ರತಿಭೆಗೆ ವೇದಿಕೆಯಾದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಮಂಜೇಶ್ವರ ಬಿ.ಪಿ.ಸಿ ರಾಜಗೋಪಾಲನ್ ಪಿ. ಸ್ವಾಗತಿಸಿ, ತರಬೇತುದಾರ ಪಿ. ಸುಮಯ್ಯ ವಂದಿಸಿದರು.

.jpg)
.jpg)
