HEALTH TIPS

ಕ್ಯಾಲಿಫೋರ್ನಿಯಾ: ಇಬ್ಬರು ಮಲಯಾಳಿ ಮಹಿಳೆಯರ ಹತ್ಯೆ ; ಸ್ನೇಹಿತೆ ಪೋಲಿಸ್ ವಶಕ್ಕೆ

ತಿರುವನಂತಪುರಂ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಮಲಯಾಳಿ ಮಹಿಳೆಯರು ಹತ್ಯೆಯಾಗಿರುವ ಬಗ್ಗೆ ವರದಿಯಾಗಿದೆ. ಮೃತರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಸಂಕೀರ್ಣದಲ್ಲೇ ವಾಸಿಸುತ್ತಿದ್ದ ಅವರ ಸ್ನೇಹಿತೆಯೇ ಈ ಕೊಲೆ ಮಾಡಿದ್ದಾಳೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.


ಮೃತರನ್ನು ತ್ರಿಶೂರ್ ಜಿಲ್ಲೆಯ ಮಣ್ಣುತ್ತಿ ಸಮೀಪದ ಮುಡಿಕ್ಕೋಡ್ ನಿವಾಸಿ ಅಂಜನಾ (35) ಹಾಗೂ ತಿರುವನಂತಪುರಂನ ಕೇಶವದಾಸಪುರಂ ನಿವಾಸಿ ಆಯನ್ ಮೇರಿ ಮ್ಯಾಥ್ಯೂ (40) ಎಂದು ಗುರುತಿಸಲಾಗಿದೆ.

ಅಂಜನಾ ಮತ್ತು ಆನ್ ಮೇರಿ ಇಬ್ಬರನ್ನೂ ಅವರ ಸ್ನೇಹಿತೆ ಅನಿಲಾ ಹತ್ಯೆ ಮಾಡಿದ್ದಾಳೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಗಳಿಗೆ ಲಭಿಸಿರುವ ಮಾಹಿತಿಯ ಪ್ರಕಾರ, ಸ್ಯಾನ್ ಜೋಸ್ ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆನ್ ಮೇರಿ ಅವರೊಂದಿಗೆ ಶಂಕಿತ ಆರೋಪಿಗೆ ವಿವಾದವಿತ್ತು ಎಂದು ಆನ್ ಮೇರಿ ಅವರ ಕುಟುಂಬದ ಸ್ನೇಹಿತ ಜೆರ್ರಿ ಸ್ಯಾಮ್ ಜೋಸೆಫ್ ತಿಳಿಸಿದ್ದಾರೆ. ಆರೋಪಿಯು ಆನ್ ಮೇರಿ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ ಎಂದು ಅವರು ಹೇಳಿದ್ದಾರೆ.

ಆದರೆ, ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಕುಟುಂಬಕ್ಕೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಂಜನಾ ಅವರ ಸೋದರಸಂಬಂಧಿ ವಿನೋದ್ ತಿಳಿಸಿದ್ದಾರೆ. ಅನಿಲಾ ಎಂಬಾಕೆ ಕಾರಿನಿಂದ ಅಂಜನಾ ಅವರಿಗೆ ಢಿಕ್ಕಿ ಹೊಡೆಸಿ ಹತ್ಯೆ ಮಾಡಿರುವುದಾಗಿ ಮಾಹಿತಿ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಆನ್ ಮೇರಿ ಸುಮಾರು 10 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದು, ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೋಟ್ಟಯಂನ ಚಿಂಗವನಂ ಮೂಲದ ಪಲ್ಲಾತ್ರಾ ಜೇಕಬ್ ಅವರನ್ನು ವಿವಾಹವಾಗಿರುವ ಆನ್ ಮೇರಿ ಪತಿಯೊಂದಿಗೆ ಅಮೆರಿಕದಲ್ಲೇ ವಾಸಿಸುತ್ತಿದ್ದಾರೆ.

ಅಂಜನಾ ಕಳೆದ ಸುಮಾರು ಆರು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪೀಚಿ ಸಮೀಪದ ವಿಲಂಗನ್ನೂರು ಮೂಲದ ಅವರ ಪತಿ ವಿಜೀಶ್ ಕೂಡ ಅಮೆರಿಕದಲ್ಲೇ ಉದ್ಯೋಗದಲ್ಲಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries