HEALTH TIPS

ಮಾದಕವಸ್ತು ಸಾಗಾಟಕ್ಕೆ ನಕಲಿ ದಾಖಲೆ-ವಂಚನಾ ತಂಡದ ಬಂಧನ

ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಇತರ ವಂಚನೆಗಳಿಗೆಗಾಗಿ ಬ್ಯಾಂಕ್ ಖಾತೆ ತೆರೆಯಲು ನಕಲಿ ದಾಖಲೆಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಸೇರಿ ಇಬ್ಬರನ್ನು ತಲಶ್ಶೇರಿ ಎಎಸ್‍ಪಿ ಡಾ. ಎಂ ನಂದಕುಮಾರ್ ನೇತೃತ್ವದ ಪೆÇಲೀಸರ ತಂಡ ಬೆಂಗಳೂರಿನಿಂದ ಬಂಧಿಸಿದೆ. 


ಕಾಸರಗೋಡು ಮೊಗ್ರಾಲ್ ಕೂಟ್ಟಾಂಯಂ ವಳಪ್ಪಿಲ್ ಅಬ್ದುಲ್ ರಹ್ಮಾನ್ (39)ಎರ್ನಾಕುಳಂ ಪಳ್ಳುತುರುತಿಯ ಕೆ.ಎಂ. ರಿಶಾದ್ (41) ಬಂದಿತರು 

ಆರೋಪಿಗಳಿಂದ ನೂರಕ್ಕೂ ಮಿಕ್ಕಿ   ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಲವು ನಕಲಿ ಸರ್ಟಿಫಿಕೇಟ್, ಮೊಬೈಲ್‍ಸಿಮ್ ಕಾರ್ಡ್‍ಗಳು, ಮೊಹರುಗಳು ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದನ್ನು ಬೆಂಗಳೂರಿನ ಪ್ರಿಂಟಿಂಗ್ ಸ್ಟುಡಿಯೋ ಒಂದರಲ್ಲಿ ಸಜ್ಜುಗೊಳಿಸಿ, ನಕಲಿ ದಾಖಲೆಪತ್ರಗಳನ್ನು  ತಯಾರಿಸುತ್ತಾರೆ. 

ಜತೆಗೆ ಮಾದಕದ್ರವ್ಯ ದಂಧೆಕೋರರಿಗೆ ವಾಸ್ತವ್ಯಕ್ಕೆ ಕೊಠಡಿ, ಪ್ರಯಾಣ ಸೌಕರ್ಯ ಒದಗಿಸಿಕೊಡುವುದಲ್ಲದೆ,  ಮಾದಕ ದ್ರವ್ಯ ಸಾಗಾಟಕ್ಕೆ ನಕಲಿ ದಾಖಲೆಪತ್ರ ಒದಗಿಸುತ್ತಾರೆ.  ಅಗತ್ಯದ ಮಾದಕವಸ್ತುಗಳನ್ನು ದಂಧೆಯವರು ದೆಹಲಿಯಿಂದ ಅತೀ ಗುಪ್ತವಾಗಿ ತರಿಸುತ್ತಾರೆ. ಕೆಲವು ದಿನಗಳ ಹಿಂದೆ 700 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಶಾದ್ ಎಂಬಾತನನ್ನು ಬಂಧಿಸಲಾಗಿದ್ದು, ಈತನೊಂದಿಗೆ ತಂಡ ಸಂಬಂಧ ಹೊಂದಿತ್ತೆಂದು ಎಸ್.ಪಿ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪೆÇಲೀಸರು ಕಾಸರಗೋಡಿಗೂ ವಿಸ್ತರಿಸಲು ಮುಂದಾಗಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries