ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ, ಕಾಸರಗೋಡು ಇದರ ವತಿಯಿಂದ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವ 'ಸಾಧಕಾಭಿವಂದನಂ' ವಿಶೇಷ ಅಭಿಯಾನದ ಅಂಗವಾಗಿ ಸನ್ಮಾನ ಕಾರ್ಯಕ್ರಮ ಇಂದು(ಸೆ.22) ಕನ್ಯಪ್ಪಾಡಿಯಲ್ಲಿ ನಡೆಯಲಿದೆ.
ಗಡಿನಾಡ ಕನ್ನಡಿಗ ಹಾಗೂ ಕೇರಳ ಸರ್ಕಾರದ ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಕೇರಳ ಹೌಸ್ ನವದೆಹಲಿ ಇದರ ಅಧಿಕಾರಿ ಮುಹಮ್ಮದ್ ಕುಂಞÂ ಕನ್ಯಪ್ಪಾಡಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ. ಶಂಕರ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಸನ್ಮಾನ ನೆರವೇರಿಸುವರು. ಕಾರ್ಯಕ್ರಮದಲ್ಲಿ ಮಲಬಾರ್ ದೇವಸ್ವಂ ಮಂಡಳಿ ಸದಸ್ಯ ಎ.ಕೆ. ಶಂಕರ ಆದೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೇರಳ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕಾಸರಗೋಡು ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ, ಆಕಾಶವಾಣಿ ಮಂಗಳೂರು ನಿರೂಪಕಿ ಅಕ್ಷತಾ ರಾಜ್ ಪೆರ್ಲ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಬದಿಯಡ್ಕ ಪಂಚಾಯತಿ ಸದಸ್ಯ ಗಂಗಾಧರ ಗೋಳಿಯಡ್ಕ ಸಹಿತ ಹಲವು ಗಣ್ಯರು ಶುಭಾಶಂಸನೆಗೈಯ್ಯುವರು.
ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, 'ಸಾಧಕಾಭಿವಂದನಂ' ಕಾರ್ಯಕ್ರಮದ ಸಂಚಾಲಕ ಹಾಗೂ ನಿವೃತ್ತ ಉಪತಹಸೀಲ್ದಾರ್ ನಾರಾಯಣ ಗೋಸಾಡ, ಸಂಧ್ಯಾ ಗೀತಾ ಬಾಯಾರು ಮೊದಲಾದವರು ನೇತೃತ್ವ ನೀಡುವರು.

.jpg)
.jpg)
