ಬೆಂಗಳೂರು: ಈ ವರ್ಷದ ಅಂತ್ಯದಲ್ಲಿ ನಿಗದಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ಎಲ್‌ವಿಎಂ3-ಎಂ7 ಮಿಷನ್‌ನ ಏಳನೇ ಕಾರ್ಯಾಚರಣೆಯಲ್ಲಿ ಬಳಸುವ ಕ್ರಯೋಜೆನಿಕ್ ಎಂಜಿನ್‌ನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ಪರೀಕ್ಷೆಯನ್ನು 'ಈಟighಣ ಂಛಿಛಿeಠಿಣಚಿಟಿಛಿe ಊoಣ ಖಿesಣiಟಿg' ಎಂದು ಕರೆಯಲಾಗಿದೆ.
ಅಂದರೆ, ರಾಕೆಟ್‌ನಲ್ಲಿ ಬಳಸುವ ಮೊದಲು, ಎಂಜಿನ್ ಅನ್ನು ನೈಜ ಕಾರ್ಯಾಚರಣೆಯ ಪರಿಸ್ಥಿತಿಗೆ ಒಳಪಡಿಸಿ, ಅದರ ಕಾರ್ಯಕ್ಷಮತೆ ಪರಿಶೀಲಿಸುವುದಾಗಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದು LVM3-M7 ಮಿಷನ್‌ಗೆ ಪ್ರಮುಖ ಹಂತವಾಗಿದೆ.
ಇದೇ ಪರೀಕ್ಷೆಯು C32 ಹಂತಕ್ಕಾಗಿ ವಿನ್ಯಾಸಗೊಳಿಸಲಾದ LOX ಟ್ಯಾಂಕ್ ಪ್ರೆಶರೈಸೇಶನ್ ಮಾಡ್ಯೂಲ್‌ನ(ಎಲ್‌ಟಿಪಿಎಂ) ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಇದು ಭಾರತದ ಗಗನಯಾನ ಕಾರ್ಯಾಚರಣೆಗಳಿಗೆ ಯೋಜಿಸಲಾದ ಅಪ್‌ಗ್ರೇಡೆಡ್ ಕ್ರಯೋಜೆನಿಕ್ ಮೇಲಿನ ಪರೀಕ್ಷಾ ಹಂತವಾಗಿದೆ ಎಂದು ಅದು ಹೇಳಿದೆ.
ಮೂವರು ಗಗನಯಾನಿಗಳನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ ಎತ್ತರದ ಕಕ್ಷೆಗೆ ಕೊಂಡೊಯ್ಯುವುದು ಭಾರತದ ಗಗನಯಾನ ಯೋಜನೆಯಾಗಿದೆ. ಇದು ಭಾರತದ ಮಾನವ ಬಾಹ್ಯಾಕಾಶ ಹಾರಾಟ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ.
ಮಹೇಂದ್ರಗಿರಿಯ ಇಸ್ರೊ ಪ್ರಾಪುಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಈ ಪರೀಕ್ಷೆ ನಡೆದಿದೆ.
ಹಿಂದೆ GSLV MkIII ಎಂದು ಕರೆಯಲಾಗುತ್ತಿದ್ದ LVM3, ಇಸ್ರೊದ ಅತ್ಯಂತ ಭಾರವಾದ ರಾಕೆಟ್ ಆಗಿದ್ದು, ಅದರ ಹಾರಾಟದಲ್ಲಿ ಮೇಲಿನ ಹಂತಕ್ಕೆ ಶಕ್ತಿ ತುಂಬಲು CE20 ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸಲಾಗುತ್ತದೆ.

