ತಿರುವನಂತಪುರಂ: : ಸ್ಥಳೀಯಾಡಳಿತ ಸಂಸ್ಥೆಗಳು ಹಣವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮತ್ತು ಆಯಾ ಕಾಲಕ್ಕೆ ಬಳಸಿಕೊಳ್ಳಬೇಕು ಎಂದು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಹೇಳಿದರು. ಗುಲಾಟಿ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್ ಅಂಡ್ ಟ್ಯಾಕ್ಸೇಶನ್ (ಜಿಐಎಫ್.ಟಿ) ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಂದು ಪಂಚಾಯತ್ ನಲ್ಲಿಯೂ ಉತ್ತಮ, ಪ್ರಾತ್ಯಕ್ಷಿಕೆ ನೀಡಬಹುದಾದ ಮತ್ತು ಉತ್ಪಾದಕ ಯೋಜನೆಗಳು ಇರಬೇಕು. ಗ್ರಾಮಗಳಲ್ಲಿ 'ನಗರ ಪಂಚಾಯತ್' ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯಾಡಳಿತ ಸಂಸ್ಥೆಗಳು ನಿಧಿಯನ್ನು ಬಳಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಚಿವ ಕೆ.ಎಂ. ಶಾಜಿ ಹೇಳಿದರು.
ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಪ್ರೊ. ಎಂ. ಎ. ಉಮ್ಮನ್ ಅವರು ಮುಖ್ಯ ಭಾಷಣ ಮಾಡಿದರು.
'ಕೇರಳದಲ್ಲಿ ಹಣಕಾಸು ಆಯೋಗ ಮತ್ತು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು: ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಜಿಐಎಫ್.ಟಿ. ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಆರ್. ಜ್ಯೋತಿಲಾಲ್ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಪೆÇ್ರ. ಎಂ. ಎ. ಉಮ್ಮನ್ ಅವರು ಮುಖ್ಯ ಭಾಷಣ ಮಾಡಿದರು.
ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ಪ್ರಧಾನ ನಿರ್ದೇಶಕಿ ಡಾ. ದಿವ್ಯಾ ಎಸ್. ಅಯ್ಯರ್, ಜಿಐಎಫ್.ಟಿ. ನಿರ್ದೇಶಕ ಪ್ರೊ. ಕೆ. ಜೆ. ಜೋಸೆಫ್ ಮತ್ತು ಸ್ಥಳೀಯ ಹಣಕಾಸು ಕೋಶ ಸಂಯೋಜಕ ಡಾ. ನಿರ್ಮಲ್ ರಾಯ್, ವಿ.ಪಿ. ಉಪಸ್ಥಿತರಿದ್ದರು.
ವಿವಿಧ ಅಧಿವೇಶನಗಳಲ್ಲಿ ನಡೆದ ಕಾರ್ಯಾಗಾರದಲ್ಲಿ ನೀತಿ ನಿರೂಪಕರು, ಸಾರ್ವಜನಿಕ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಹಣಕಾಸು ಆಯೋಗದ ಮಾಜಿ ಸದಸ್ಯರು ಮುಂತಾದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.



