ಕ್ರಿಕೆಟ್ ಆಟದ ಮಧ್ಯೆ ಕುಸಿದು ಬಿದ್ದ ಯುವಕ ಮೃತ್ಯು
ಮಂಜೇಶ್ವರ: ಕ್ರಿಕೆಟ್ ಆಟದ ಮಧ್ಯೆ ಯುವಕನೊಬ್ಬ ಕುಸಿದು ಬಿದ್ದು ಮೃತ ಪಟ್ಟಿದ್ದಾನೆ.
ಪೈವಳಿಕೆ ಸಮೀಪದ ಜೋಡುಕಲ್ಲು ನಿವಾಸಿ ಪದ್ಮನಾಭ (25) ಮೃತ ದುದರ್ೈವಿ. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಮೀಯಪದವು ಮೈದಾನದಲ್ಲಿ ಕ್ರಿಕೆಟ್ ಆಟ ನಡೆಯುತ್ತಿರುವ ಮಧ್ಯೆ ಬೌಲಿಂಗ್ ನಡೆಸುತ್ತಿದ್ದ ಪದ್ಮನಾಭ ಕುಸಿದು ಬಿದ್ದರು. ಒಂದು ಓವರಿನಲ್ಲಿ ಒಂದು ಬಾಲ್ ಬಾಕಿ ಇರುವ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಪದ್ಮನಾಭರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಸಾವು ಸಂಭವಿಸಿದೆ. ಪದ್ಮನಾಭರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಗಳನ್ನು ದಿನದ ಮಟ್ಟಿಗೆ ನಿಲ್ಲಿಸಿರುವುದಾಗಿ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.