ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿರುವ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ರಚೆನೆಯ ಮುಹೂರ್ತವನ್ನು ಗಣಹೋಮ ಮಾಡುವ ಮೂಲಕ ವೇದಮೂರ್ತಿ ವಿಷ್ಣು ಭಟ್ ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸುರೇಶ (ನಿವೃತ್ತ ಯೋಧ) ಉಪಾಧ್ಯಕ್ಷ ಕೆ.ಸುಧಾಕರ ಕಾಮತ್, ಪದಾಧಿಕಾರಿಗಳಾದ ಶಂಕರ ಆಳ್ವ, ಸುಜಿತ್ ರೈ, ತುಕಾರಾಮ, ದಯಾನಂದ ರಾವ್, ವಿವೇಕಾನಂದ ಭಕ್ತ, ಪ್ರಶಾಂತ್, ಶಿವಾನಂದ ರಾವ್ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.


