ಮುಳ್ಳೇರಿಯ: ಕಯ್ಯಾರ ಕಿಞï್ಞಣ್ಣ ರೈ ಗ್ರಂಥಾಲಯ ಮುಳ್ಳೇರಿಯ ಇದರ ನೇತೃತ್ವದಲ್ಲಿ ಜು. 27 ರಂದು ಶನಿವಾರ ಬೆಳಿಗ್ಗೆ 10 ಕ್ಕೆ ಮುಳ್ಳೇರಿಯ ಹೈಸ್ಕೂಲ್‍ನಲ್ಲಿ ನಾಡೋಜ ಕವಿ ಕಯ್ಯಾರ ಕಿಞï್ಞಣ್ಣ ರೈ ಅವರ ಆತ್ಮಕತೆ 'ದುಡಿತವೇ ನನ್ನ ದೇವರು' ಕೃತಿಯ ಬಗೆಗೆ ಸಂವಾದ ನಡೆಯಲಿದೆ.
ಸಮಾರಂಭದಲ್ಲಿ ಚಂದ್ರನ್ ಮೊಟ್ಟಮ್ಮಲ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸೀ ಗೋಪಾಲಕೃಷ್ಣ ಭಟ್, ವಿದ್ವಾನ್.ಬೆಳ್ಳಿಗೆ ನಾರಾಯಣ ಮಣಿಯಾಣಿ, ರಾಮಚಂದ್ರ ಬಲ್ಲಾಳ್ ಮುಳ್ಳೇರಿಯ ಸಂವಾದದಲ್ಲಿ ಪಾಲ್ಗೊಳ್ಳುವರು. ಶಿಕ್ಷಕಿ, ಸಂಶೋಧನಾ ವಿದ್ಯಾರ್ಥಿ ಸೌಮ್ಯಾ ಪ್ರಸಾದ್ ಕಿಳಿಂಗಾರ್ ಕಯ್ಯಾರರ ಆತ್ಮಕತೆಯ ಬಗ್ಗೆ ವಿಶೇಷೋಪನ್ಯಾಸ ನೀಡುವರು. ಗ್ರಂಥಾಲಯದ ಮೇಲ್ವಿಚಾರಕ ಕೆ.ಕೆ. ಮೋಹನನ್ ಉಪಸ್ಥಿತರಿರುವರು.


