ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಗೋಡ್ಲು ಸನ್ನಿಧಿಯಲ್ಲಿ ಕಿರುಷಷ್ಠೀ ಉತ್ಸವ ಮತ್ತು ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಡಿ.25 ರಿಂದ 27ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.25 ರಂದು ಗುರುವಾರ ರಾತ್ರಿ 7.30ಕ್ಕೆ ರಂಗಪೂಜೆ, 8ಕ್ಕೆ ಅತ್ತಾಳ ಪೂಜೆ, ಪ್ರಸಾದ ವಿತರಣೆ, 8.30 ರಿಂದ ಊರ ಬಾಲ ಕಲಾವಿದರಿಂದ ನೃತ್ಯ ವೈವಿಧ್ಯ, 9 ರಿಂದ ಕಲ್ಲಕಟ್ಟ ಶ್ರೀವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಭಜನೆ, ಪ್ರಸಾದ ಭೋಜನ ನಡೆಯಲಿದೆ.
26 ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹವನ, 7 ರಿಂದ ದೀಪ ಪ್ರತಿಷ್ಠೆ, ಉಷಃಪೂಜೆ, 8 ರಿಂದ ವಿವಿಧ ತಂಡಗಳಿಂದ ಭಜನೆ, 11 ರಿಂದ ನವಕಾಭಿಷೇಕ, 11 ರಿಂದ ಮಧ್ಯಾಹ್ನ 1ರ ತನಕ ಡಾ.ವಾಣಿಶ್ರೀ ಕಾಸರಗೋಡು ತಂಡದವರಿಂದ ಸಾಹಿತ್ಯ ಗಾನ ವೈಭವ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ 5ಕ್ಕೆ ಶ್ರೀರಕ್ತೇಶ್ವರಿ ತಂಬಿಲ ಸೇವೆ, 5 ರಿಂದ ಭಜನೆ, 6ಕ್ಕೆ ತಾಯಂಬಕ, 7 ರಿಂದ ಏಣಿಯರ್ಪು ಕೋದಂಬರತ್ತ್ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 7.30ರಿಂದ ಮಹಾಪೂಜೆ, ರಾತ್ರಿ 8 ರಿಂದ ಶ್ರೀಭೂತಬಲಿ ಉತ್ಸ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ. ಬಳಿಕ ರಾತ್ರಿ 11 ರಿಂದ ಶ್ರೀವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಲಿದೆ. ಡಿ.27 ರಂದು ಬೆಳಿಗ್ಗೆ 10.30ಕ್ಕಡೆ ಶ್ರೀವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಭಂಡಾರ ಏಣಿಯರ್ಪಿಗೆ ಹಿಂತಿರುಗುವುದರೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ. ಅದೇ ದಿನ ಪ್ರತಿಷ್ಠಾ ದಿನದಂಗವಾಗಿ ಬೆಳಿಗ್ಗೆ 6ಕ್ಕೆ ಗಣಪತಿ ಹವನ, 11ಕ್ಕೆ ನವಕಾಭಿಷೇಕ, 11.30ಕ್ಕೆ ಶ್ರೀರಕ್ತೇಶ್ವರಿ ತಂಬಿಲ ಸೇವೆ, ರಾತ್ರಿ 7ಕ್ಕೆ ಕಾರ್ತಿಕೋತ್ಸವ, ಪ್ರಸಾದ ವಿತರಣೆ ನಡೆಯಲಿದೆ.

