HEALTH TIPS

ಫೆಬ್ರವರಿ 07 ರಂದು ಬಂಬ್ರಾಣ ಕೊಟ್ಯದ ಮನೆ ವಾರ್ಷಿಕ ಧರ್ಮನೇಮೋತ್ಸವ

ಕುಂಬಳೆ: ಕುಂಬಳೆ ಸಮೀಪದ ಬಂಬ್ರಾಣ ಕೊಟ್ಯದ ಮನೆ ಶ್ರೀ ಧೂಮಾವತಿ ದೈವಸ್ಥಾನದ ವಾರ್ಷಿಕ ಧರ್ಮನೇಮೋತ್ಸವ ಫೆ. 6 ಮತ್ತು 7 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಫೆ. 6 ಶುಕ್ರವಾರ ಶ್ರೀ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯರ ನೇತೃತ್ವದಲ್ಲಿ ಪ್ರತಿಷ್ಠಾ ದಿನಾಚರಣೆ ನಡೆಯಲಿದೆ. ಬೆಳಿಗ್ಗೆ 8.ಕ್ಕೆ ಗಣಪತಿ ಹವನ, 9.ಕ್ಕೆ ನಾಗತಂಬಿಲ, 10.ಕ್ಕೆ ಸತ್ಯನಾರಾಯಣ ಪೂಜೆ,  11.ಕ್ಕೆ ಹರಿಸೇವೆ ನಂತರ ಅನ್ನಸಂತರ್ಪಣೆ. ಸಂಜೆ ಗಂಟೆ 6.00ಕ್ಕೆ ಭಜನಾ ಸಂಕೀರ್ತನೆ ಶ್ರೀ ವಿಷ್ಣು ಮಹಿಳಾ ಭಜನಾ ಸಂಘ ವಿಷ್ಣುನಗರ ಮುಂಡಿತ್ತಡ್ಕ ಮತ್ತು ಗಂಟೆ 6.00ಕ್ಕೆ ದುರ್ಗಾಪೂಜೆ ರಾತ್ರಿ ಗಂಟೆ 8.00ಕ್ಕೆ ರಾಹುಗುಳಿಗ ಬನದಲ್ಲಿ ತಂಬಿಲ ಗಂಟೆ 8.30ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು. ಗಂಟೆ 9.00ಕ್ಕೆ ಸಹ ದೈವಗಳಿಗೆ ಮತ್ತು ಕಲಾಲ್ತ ಗುಳಿಗನ ಕೋಲ ಅನ್ನಸಂತರ್ಪಣೆ ನಡೆಯಲಿದೆ. ಫೆ.7 ಶನಿವಾರ ಬೆಳಿಗ್ಗೆ 11ಕ್ಕೆ ಶ್ರೀ ಧೂಮಾವತಿ ದೌವದ ಧರ್ಮನೇಮ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.ಕ್ಕೆ ಕೊರತಿ ದೈವದ ಕೋಲ, ರಾತ್ರಿ 8. ರಿಂದ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಮುಕಾಂಬಿಕ ಗುಳಿಗ, ಕಲ್ಲುರ್ಟಿ ದೈವಗಳಿಗೆ ಕೋಲ, ರಾತ್ರಿ 9. ರಿಂದ ಅನ್ನಸಂತರ್ಪಣೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries