HEALTH TIPS

ಪುತ್ತಿಗೆ ಮುಹಿಮ್ಮತ್‍ನಲ್ಲಿ ಸಯ್ಯದ್ ತ್ವಾಹಿರುಲ್ ಅಹ್ದಲ್ ಪ್ರಶಸ್ತಿ ಪ್ರದಾನ ಸಮಾರಂಭ

ಕುಂಬಳೆ: ಮಲಿಕ್ ದಿನಾರ್ ಕಲ್ಚರಲ್ ಫೆÇೀರಂ ವತಿಯಿಂದ ನೀಡಲಾಗುವ ಏಳನೇ ಸೈಯದ್ ತಾಹಿರುಲ್ ಅಹ್ದಲ್ ಪ್ರಶಸ್ತಿಯನ್ನು ಕೇರಳ ಮುಸ್ಲಿಂ ಜಮಾತ್ ನ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸುನ್ನಿ ಚಳವಳಿಯ ಪ್ರಮುಖರಾದ ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ ಅವರಿಗೆ ಪ್ರದಾನ ಮಾಡಲಾಯಿತು.

ಪುತ್ತಿಗೆ ಮುಹಿಮ್ಮತ್‍ನಲ್ಲಿ ನಡೆದ 20ನೇ  ಸಯ್ಯದ್ ತ್ವಾಹಿರುಲ್ ಅಹ್ದಲ್ ತಙಳ್ ಉರುಸ್ ಅಂಗವಾಗಿ ನಡೆದ ಅಹಲಿಯಾ ಆಧ್ಯಾತ್ಮಿಕ ಸಮ್ಮೇಳನದಲ್ಲಿ, ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಪ್ರಶಸ್ತಿ ಪ್ರದಾನ ಮಾಡಿದರು. ಹಜ್ ಸಮಿತಿಯ ಮಾಜಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಸಮಾರಂಭ ಉದ್ಘಾಟಿಸಿದರು.  ಮರ್ಕಜ್ ಅಧ್ಯಕ್ಷ ಸಯ್ಯದ್ ಅಲಿ ಬಾಫಕಿ ತಙಳ್ ಹಾಗೂ  ಸೈಯದ್ ಹಸನುಲ್ ಅಹ್ದಲ್ ತಙಳ್ ಹಾಗೂ ಬಿ.ಎಸ್.ಅಬ್ದುಲ್ಲಾ ಕುಞÂ ಫೈಝಿ ಶಾಲು ಹೊದಿಸಿ ಗೌರವಿಸಿದರು.  

ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಅವರು 1986ರಿಂದ ಎಸ್‍ಎಸ್‍ಎಫ್ ಹಾಗೂ ಎಸ್‍ವೈಎಸ್ ಸಂಘಟನೆಗಳಲ್ಲಿ ಘಟಕ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಇವರು ಪ್ರಸಕ್ತ  ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಜನರಲ್ ಸೆಕ್ರಟರಿ, ಸಅದಿಯ್ಯ ಕ್ಯಾಬಿನೆಟ್ ಸದಸ್ಯ, ಮುಹಿಮ್ಮಾತ್ ಉಪಾಧ್ಯಕ್ಷ, ಮಲ್‍ಹರ್ ಸೆಕ್ರಟರಿ, ಕಲ್ಲಕಟ್ಟ ಮಜ್ಮಹ್ ಹಾಗೂ ಮದನೀಸ್ ಅಸೋಸಿಯೇಶನ್ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries