HEALTH TIPS

ಬದುಕಲು ಹೊಸ ಮಾರ್ಗ ಕಂಡುಕೊಂಡ ಖಾಸಗೀ ಬಸ್ ಕಾರ್ಮಿಕರು!

   
        ಕಾಸರಗೋಡು: ಕೋವಿಡ್‍ನಿಂದಾಗಿ ಬಸ್‍ಗಳಲ್ಲಿ ಪ್ರಯಾಣಿಕರು ಇಲ್ಲದಿರುವುದರಿಂದ ಆದಾಯವಿಲ್ಲದೆ ಸಂಚಾರ ಮೊಟಕುಗೊಂಡ ಬಸ್‍ನ ಕಾರ್ಮಿಕರು ಉಪಜೀವನಕ್ಕಾಗಿ ಹೊಸ ಮಾರ್ಗವನ್ನು ಅನುಸರಿಸತೊಡಗಿದ್ದಾರೆ.
        ಕಾಸರಗೋಡು-ಕಣ್ಣೂರು ರೂಟ್‍ನಲ್ಲಿ ಸಂಚರಿಸುವ ಸೂಪರ್ ಫಾಸ್ಟ್ ಬಸ್‍ನ ಸಿಬ್ಬಂದಿಗಳು ಕಣ್ಣೂರಿನಿಂದ ಟಿ ಶರ್ಟ್ ಸಹಿತ ಬಟ್ಟೆ ಬರೆಗಳನ್ನು ಕಾಸರಗೋಡಿಗೆ ತಂದು ಬಸ್‍ನಲ್ಲೇ ಮಾರಾಟ ಮಾಡುತ್ತಿದ್ದಾರೆ. ಬಸ್ ಟಿಕೇಟ್‍ನಿಂದ ಲಭಿಸುವ ಆದಾಯ ಡೀಸೆಲ್‍ಗೆ ಕೂಡಾ ಸಾಕಾಗುತ್ತಿಲ್ಲವೆಂದು ಬಸ್ ಕಾರ್ಮಿಕರು ಹೇಳುತ್ತಿದ್ದಾರೆ. ಕೆಲವೊಮ್ಮೆ ಆಹಾರಕ್ಕೂ, ನಿತ್ಯ ಖರ್ಚಿಗೂ ಹಣ ಲಭಿಸುತ್ತಿಲ್ಲ.
       ಅದರಿಂದ ಬಟ್ಟೆ ಬರೆಗಳನ್ನು ಮಾರಾಟ ನಡೆಸಿ ಖರ್ಚಿಗೆ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕಣ್ಣೂರಿನಿಂದ ಬರುವ ಖಾಸಗಿ ಬಸ್‍ಗಳು ಕಾಸರಗೋಡಿಗೆ ತಲುಪಿದ ಬಳಿಕ ಬಟ್ಟೆ ಬರೆಗಳನ್ನು ಮಾರಾಟ ಮಾಡುತಿದ್ದಾರೆ.
       ಬಸ್‍ಗಳಲ್ಲಿ ಪ್ರಯಾಣಿಸಿದರೆ ಕೊರೊನಾ ಬಾಧಿಸುವುದೋ ಎಂಬ ಭಯದಿಂದ ಪ್ರಯಾಣಿಕರು ಬಸ್ ಸಂಚಾರವನ್ನು ಹೊರತುಪಡಿಸಿದ್ದು, ಇದು ಆದಾಯವನ್ನು ಇಲ್ಲದಾಗಿಸಿದೆ ಎಂದು ಬಸ್ ಸಿಬ್ಬಂದಿಗಳು ಹೇಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries