HEALTH TIPS

ಮುಯ್ಯಿಗೆ ಮುಯ್ಯಿ: ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಪ್ರತಿಯಾಗಿ ಭಾರತದ ಶಿಪ್ಮೆಂಟ್ ಗಳಿಗೆ ನಿರ್ಬಂಧ


      ನವದೆಹಲಿ:ಭಾರತ-ಚೀನಾ ಗಡಿ ಭಾಗದ ಸಮಸ್ಯೆ ಹೆಚ್ಚಾಗುತ್ತಿರುವಂತೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು, ಅಭಿಯಾನ ಭಾರತ ದೇಶದಲ್ಲಿ ಜೋರಾಗುತ್ತಿದೆ, ಚೀನಾ ಮೂಲದ ಸಾಗಣೆ ಹಡಗನ್ನು ದೇಶೀಯ ಬಂದರುಗಳಲ್ಲಿ ತಡೆಹಿಡಿದಿರುವ ಭಾರತದ ಕ್ರಮಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತ ಮೂಲದ ಸಾಗಾಟ ಹಡಗುಗಳನ್ನು ಹಾಂಕಾಂಗ್ ನಲ್ಲಿ ತಡೆಹಿಡಿಯುತ್ತಿದೆ.
            ಚೀನಾ ಭಾರತದ ಕ್ರಮಕ್ಕೆ ಪ್ರತಿಯಾಗಿ ಮುಯ್ಯಿಗೆ ಮುಯ್ಯಿ ಎಂಬಂತೆ ವರ್ತಿಸುತ್ತಿದೆ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೊರ್ಟ್ ಆರ್ಗನೈಸೇಷನ್ ((ಎಫ್ಐಇಒ ) ಅಧ್ಯಕ್ಷ ಎಸ್ ಕೆ ಸರಾಫ್ ತಿಳಿಸಿದ್ದಾರೆ. ಇದು ವಸ್ತುಗಳ ರವಾನೆ ತೆರವು ವಿಳಂಬಕ್ಕೆ ಕಾರಣವಾಗುತ್ತಿದೆ. ಎಫ್‍ಐಇಒ ಈ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ತಿಳಿಸಿದ್ದು, ಚೀನಾದಿಂದ ಬರುವ ವಸ್ತುಗಳನ್ನು ಪರಿಶೀಲಿಸಿ ಅವುಗಳಿಗೆ ತೆರವು ಅನುಮತಿ ನೀಡುವುದಕ್ಕೆ ವಿಳಂಬವಾಗುತ್ತಿದೆ. ಅಲ್ಲದೆ ಆಮದು ವೆಚ್ಚ ಕೂಡ ಹೆಚ್ಚಾಗುತ್ತಿದೆ ಎಂದು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಅನೂಪ್ ವಧವಾನ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
           ಇವೆಲ್ಲಾ ಹಠಾತ್ತನೆ ಆಗಿರುವ ಬೆಳವಣಿಗೆಗಳಾಗಿರುವುದರಿಂದ ಉದ್ಯಮ ಮೇಲೆ ಭಾರೀ ಹೊಡೆತ ಬೀಳುತ್ತಿದೆ. 200ಕ್ಕೂ ಹೆಚ್ಚು ಕೈಗಾರಿಕೆಗಳ ಉದ್ಯಮ ಮೇಲೆ ಕಳೆದ ತಿಂಗಳಿನಿಂದ ಪರಿಣಾಮ ಬೀರಿದೆ. ಈ ಬಗ್ಗೆ ಕೂಡಲೇ ಹಣಕಾಸು ಸಚಿವಾಲಯ ಮಧ್ಯೆ ಪ್ರವೇಶಿಸಬೇಕೆಂದು ಎಫ್ಐಇಒ  ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries