ತಿರುವನಂತಪುರ: ವಿತ್ತ ಸಚಿವ ಥಾಮಸ್ ಐಸಾಕ್ ಅವರು ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿಪಕ್ಷಗಳು ನೋಟಿಸ್ ಜಾರಿಗೊಳಿಸಿವೆ. ಥಾಮಸ್ ಐಸಾಕ್ ವಿರುದ್ಧ ಶಾಸಕ ವಿ.ಡಿ.ಸತೀಶನ್ ಅವರು ನೋಟಿಸ್ ನೀಡಿದ್ದಾರೆ. ಸಿಎಜಿ ಕರಡು ವರದಿಯನ್ನು ಸಚಿವರು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಉಲ್ಲಂಘನೆಯ ನೋಟೀಸ್ ನೀಡಲಾಗಿದೆ.
ಪ್ರತಿಪಕ್ಷ ಗುಂಪುಗಳು ಮುಖ್ಯಮಂತ್ರಿಯ ರಾಜೀನಾಮೆಗೆ ಕರೆ ನೀಡಿದ್ದು ಈ ಕುರಿತು ಮಾಧ್ಯಮ ಚರ್ಚೆಯಲ್ಲಿಯೂ ಧ್ವನಿ ವ್ಯಕ್ತವಾಗಿದೆ. ಸಿಎಜಿ ವರದಿ ಬಹಿರಂಗವು ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಶಾಸಕಾಂಗದ ವಿಶೇಷ ಹಕ್ಕುಗಳ ಅತಿಕ್ರಮಣವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸಿಎಜಿ ವರದಿಯನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಬೇಕು. ಇದನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು ಮತ್ತು ರಾಜ್ಯಪಾಲರ ಅನುಮೋದನೆಯೊಂದಿಗೆ ಹಣಕಾಸು ಸಚಿವರು ಸಂಪುಟದಲ್ಲಿ ಮಂಡಿಸಬೇಕು. ಇವುಗಳಲ್ಲಿ ಯಾವುದನ್ನೂ ಪಾಲಿಸದೆ ಕಾನೂನು ಗಾಳಿಗೆ ತೂರಲಾಗಿದೆ ಎಂದು ದೂರಿರುವ ಪ್ರತಿಪಕ್ಷ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಡಹಾಕಿವೆ.


