ಕಾಸರಗೋಡು: ಜಿಲ್ಲೆಯ ಸಾಂಸ್ಕøತಿಕ ನಂಟನ್ನು ಬಲಪಡಿಸುವಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರವಾದುದು ಎಂದು ಖ್ಯಾತ ವೈದ್ಯ ಡಾ. ಅನಂತ ಕಾಮತ್ ತಿಳಿಸಿದ್ದಾರೆ.
ಅವರು ಭಾನುವಾರ, ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜಿಲ್ಲೆಯ ಸಾಮಾಜಿಕ-ಸಾಂಸ್ಕ್ರತಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ವತಿಯಿಂದ ಚಿತ್ರ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಭಾಷಾಂತರಿಸಿದ ಎರಡು ಕೊಂಕಣಿ ನಾಟಕ'ಸೂಣೆ' ಅನಿ ಸೂಣೆ ಬಾಲ'(ನಾಯಿ ಮತ್ತು ನಾಯಿ ಬಾಲ)ಪುಸ್ತಕಗಳನ್ನು ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಾಧ್ಯಾಪಕ, ನಾಟಕಕಾರ ಪ್ರೊ. ವೇಣುಗೋಪಾಲ್ ಕಾಸರಗೋಡು ಅವರ ಎರಡು ಕನ್ನಡ ಪುತ್ರಕಗಳನ್ನು ಕೊಂಕಣಿಗೆ ಭಾಷಾಂತರಿಸಲಾಗಿದೆ.
ಪ್ರಶಸ್ತಿ ವಿಜೇತ ಲೇಖಕ ಬಿ.ನರಸಿಂಗ ರಾವ್ ಪುಸ್ತಕ ಬಿಡುಗಡೆಳಿಸಿ ಮಾತನಾಡಿ, 'ಸೂಣೆ'ಮತ್ತು ಸೂಣೆ ಬಾಲ' ಪುಸ್ತಕಗಳೆರಡೂ ಸಮಾಜದ ಅಧಿಕಾರಶಾಹಿಗಳ ವಿಮರ್ಶೆಗೆ ಕೈಗನನಡಿಯಾಗಿರುವುದಾಗಿ ತಿಳಿಸಿದರು.
ಯಕ್ಷಗಾನ ಕಲಾವಿದ ಮುರಳೀಧರ ಯಾದವ್, ಕಾಸರಗೋಡು ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ, ಪತ್ರಕರ್ತ ಟಿ.ಎ.ಶಾಫಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯ ರಂಗಕರ್ಮಿ ಪಬ್ಬಾ ಕೊರಕ್ಕೋಡು ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಆಯೋಜಿಸಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪ್ರಜ್ಞಾ ಕಿರಣ್ ಪ್ರಭು ಅವರಿಂದ ಭಕ್ತಿ ಭಾವಗೀತೆಗಳ ಗಾನ ವೈಭವ ನಡೆಯಿತು. ಸಮಾಜ ಸೇವಕ ಸತೀಶ್ಚಂದ್ರ ಭಂಡಾರಿ ಕೋಳಾರು ಸ್ವಾಗತಿಸಿ, ರಂಗಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಕಾಸರಗೋಡು ಚಿನ್ನ ಕಾರ್ಯಕ್ರಮ ನಿರೂಪಿಸಿದರು.


