ಲಖನೌ: ದೆಹಲಿಯಲ್ಲಿ ನನ್ನನ್ನು ತಡೆಯಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರಕ್ಕೆ ತೆರಳಲು ನನ್ನ ಹೆಲಿಕಾಪ್ಟರ್ ಗೆ ಅನುಮತಿ ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.
ನನ್ನ ಹೆಲಿಕಾಪ್ಟರ್ ಟೇಕ್ ಆಫ್ ಆಗಲು ಅನುಮತಿ ನೀಡದ ಕಾರಣ ನಾನು ದೆಹಲಿಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಅಖಿಲೇಶ್ ಯಾದವ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ತಾವು ಹೆಲಿಕಾಪ್ಟರ್ ಜೊತೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
"ಯಾವುದೇ ಕಾರಣ ನೀಡದೆ ನನ್ನ ಹೆಲಿಕಾಪ್ಟರ್ ಮುಜಾಫರ್‌ನಗರಕ್ಕೆ ಹಾರಲು ಅನುಮತಿ ನೀಡದೆ ದೆಹಲಿಯಲ್ಲಿ ಇನ್ನೂ ಬಂಧಿಸಲಾಗಿದೆ. ಆದರೆ ಬಿಜೆಪಿಯ ಉನ್ನತ ನಾಯಕರೊಬ್ಬರು ಇಲ್ಲಿಂದ ಹಾರಿದ್ದಾರೆ. ಇದು ಸೋತ ಬಿಜೆಪಿಯ ಹತಾಶೆಯ ಪಿತೂರಿಯಾಗಿದೆ" ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು ಇಂದು ಮುಜಾಫರ್‌ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದೆ.

