ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಮೂವರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪ್ರತ್ಯೇಕ ಕೇಸು ದಾಖಲಾಗಿದೆ. ಅಂಬಲತ್ತರ, ಹೊಸದುರ್ಗ, ಚಂದೇರ ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.
ಅಂಬಲತ್ತರ ತಾಯನ್ನೂರು ಕಾಲಿಚ್ಚನಡ್ಕ ನಿವಾಸಿ ಕೆ. ಅನಿತಾ(21)ಸೋಮವಾರ ಮನೆಯಿಂದ ಹೊರಟಿದ್ದು, ಮನೆಗೆ ವಾಪಸಾಗದಿರುವ ಬಗ್ಗೆ ಈಕೆ ಸಹೋದರ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ. ಹೊಸದುರ್ಗ ಮಡಿಕೈ ಮಾಡಂ ನಿವಾಸಿ ಶ್ರೀಲಕ್ಷ್ಮೀ(20) ಎಂಬಾಕೆ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟವಳು ವಾಪಸಾಗದಿರುವ ಬಗ್ಗೆ ತಂದೆ ವಿ.ಸುಕುಮಾರನ್ ನೀಡಿದ ದೂರಿನನ್ವಯ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸ್ನೇಹಿತೆಯನ್ನು ಕಾಣಲು ಮನೆಯಿಂದ ಹೊರಟಿದ್ದ ಪಡನ್ನ ಕಾವುಂತಾಲ್ ನಿವಾಸಿ ಹಸೀನಾ(33)ನಾಪತ್ತೆಯಾಗಿರುವ ಬಗ್ಗೆ ಈಕೆ ತಾಯಿ ನೀಡಿದ ದೂರಿನ ಮೇರೆಗೆ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

