ಕುಂಬಳೆ: ಸಂಘಟನೆಯು ನಮ್ಮ ವೃತ್ತಿಗೆ ಗೌರವವನ್ನು ತಂದುಕೊಡುತ್ತದೆ. 39 ವರ್ಷಗಳ ಹಿನ್ನೆಲೆಯಿರುವ ಸಂಘಟನೆಯ ಸದಸ್ಯನಾಗಿರುವುದೇ ನಮಗೆ ಹೆಮ್ಮೆಯ ವಿಚಾರವಾಗಿದೆ. ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಮುಂದುವರಿದಾಗ ನಮ್ಮ ಕಾರ್ಯವು ವಿಜಯದತ್ತ ಸಾಗುತ್ತದೆ. ಸಂಘಟನೆಗಾಗಿ ನಾನೇನು ಮಾಡಬಹುದು ಎಂದು ಪ್ರತಿಯೊಬ್ಬ ಸದಸ್ಯನೂ ಚಿಂತಿಸಬೇಕಾಗಿದೆ ಎಂದು ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ನುಡಿದರು.
ಕುಂಬಳೆ ಮಾಧವ ಪೈ ಹಾಲ್‍ನಲ್ಲಿ ಮಂಗಳವಾರ ಜರಗಿದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕುಂಬಳೆ ವಲಯ ಸಮ್ಮೇಳನವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದೇಶೀಯ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಿದ ಸಂಘಟನೆಯ ಎಲ್ಲಾ ಚಟುವಟಿಕೆಗಳಲ್ಲಿಯೂ ಸದಸ್ಯರ ಸಹಭಾಗಿತ್ವವಿರಬೇಕು ಎಂದರು. ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಸುರೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಸಭೆ ಸಮಾರಂಭಗಳಲ್ಲಿ ಸದಸ್ಯರು ಪಾಲ್ಗೊಂಡರೆ ಮಾತ್ರ ಎಲ್ಲಾ ವಿಚಾರಗಳನ್ನು ತಿಳಿಯಲು ಸಾಧ್ಯವಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸಂಘಟನಾ ವರದಿಯನ್ನು ನೀಡಿದರು. ವನಿತಾ ವಿಂಗ್ ರಾಜ್ಯ ಸಮಿತಿ ಸದಸ್ಯ ಹರೀಶ್ ಪಾಲಕುನ್ನು ಮಾತನಾಡಿ ಅತ್ಯಾಧುನಿಕ ತಂತ್ರಜ್ಞಾನದ ವಿಚಾರಗಳನ್ನು ತಿಳಿಯುವ ತರಗತಿಗಳು ಪ್ರತೀ ಘಟಕಗಳಲ್ಲಿ ನಡೆಯಬೇಕು. ವನಿತಾ ಸದಸ್ಯರೂ ಸಂಘಟನೆಯಲ್ಲಿ ಸಕ್ರಿಯರಾಗಬೇಕು ಎಂದರು. ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ. ಕುಂಬಳೆ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಶೃಂಗಾರ್, ಜಿಲ್ಲಾ ಜೀವವಿಮಾ ಸಂಚಾಲಕ ಅಶೋಕನ್ ಪೊಯಿನಾಚಿ, ಕುಂಬಳೆ ವಲಯ ಉಸ್ತುವಾರಿ ಸುಧೀರ್ ಕಾಞಂಗಾಡು, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್‍ನ ಸಂಚಾಲಕ ಸುಕು ಸ್ಮಾರ್ಟ್, ಸಹಸಂಚಾಲಕ ಸುನಿಲ್ ಮಂಜೇಶ್ವರ ಶುಭಾಶಂಸನೆಗೈದರು. ಇದೇ ಸಂದಭರ್Àದಲ್ಲಿ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕುಂಬಳೆ ವಲಯ ಕಾರ್ಯದರ್ಶಿ ನಿತ್ಯಪ್ರಸಾದ್ ವರದಿ ಹಾಗೂ ವಲಯ ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು ಲೆಕ್ಕಪತ್ರ ಮಂಡಿಸಿದರು. ವಲಯ ಉಪಾಧ್ಯಕ್ಷ ರಾಮಚಂದ್ರ ಗಟ್ಟಿ ವಂದಿಸಿದರು. ಈ ಸಂದಭರ್Àದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಬೆಳಗ್ಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ನಾರಾಯಣ ಓಡಂಗಲ್ಲು ಪ್ರಾರ್ಥನೆ ಹಾಡಿದರು. ಕುಂಬಳೆ, ಉಪ್ಪಳ, ಬದಿಯಡ್ಕ ಘಟಕಗಳ ಸದಸ್ಯರು ಪಾಲ್ಗೊಂಡಿದ್ದರು.

.jpg)
