ಪತ್ತನಂತಿಟ್ಟ: ಮಿಥುನಮಾಸ ಪೂಜೆಗಾಗಿ ಶಬರಿಮಲೆ ಧರ್ಮಶಾಸ್ತಾ ದೇವಸ್ಥಾನ ತೆರೆಯಲಾಗಿದೆ. ಶುಕ್ರವಾರ ಸಂಜೆ 5 ಕ್ಕೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ ನಂಬೂದಿರಿ ಬಾಗಿಲು ತೆರೆದು ದೀಪ ಬೆಳಗಿಸಿದರು.
ಉಪ ದೇಗುಲಗಳಲ್ಲಿ ದೀಪ ಬೆಳಗಿಸಿ 18ನೇ ಮೆಟ್ಟಿಲು ಕೆಳಗಿರುವ ಅಗ್ನಿಕುಂಡದಲ್ಲಿ ಅಗ್ನಿಸ್ಪರ್ಶ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆಗಮಿಸಿದ ಭಕ್ತರಿಗೆ ತಂತ್ರಿ ಹಾಗೂ ಮೇಲ್ಶಾಂತಿ ವಿಭೂತಿ ಪ್ರಸಾದ ನೀಡಿದರು. ಸನ್ನಿಧಾನ ಶುಕ್ರವಾರ ತೆರೆದಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ವಿಶೇಷ ಪೂಜೆಗಳು ಇರಲಿಲ್ಲ. ಶನಿವಾರ ಬೆಳಗ್ಗೆ ನಿತ್ಯ ಪೂಜೆಯ ನಂತರ ತುಪ್ಪದ ಅಭಿಷೇಕ ನಡೆಯಿತು. ಐದು ದಿನ ಅಭಿಷೇಕ, ಪಡಿಪೂಜೆ ಮತ್ತಿತರ ಸೇವೆಗಳು ನಡೆಯಲಿವೆ. ಜೂ.19ರಂದು ರಾತ್ರಿ ಮತ್ತೆ ಬಾಗಿಲು ಮುಚ್ಚಲಾಗುವುದು.

.jpg)
