ನವದೆಹಲಿ: ಏರ್ ಮಾರ್ಷಲ್ ಅಜಯ್ ಕುಮಾರ್ ಅರೋರಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಏರ್ ಆಫೀಸರ್ (ನಿರ್ವಹಣಾ ಉಸ್ತುವಾರಿ) ಆಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
0
samarasasudhi
ನವೆಂಬರ್ 02, 2024
ನವದೆಹಲಿ: ಏರ್ ಮಾರ್ಷಲ್ ಅಜಯ್ ಕುಮಾರ್ ಅರೋರಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಏರ್ ಆಫೀಸರ್ (ನಿರ್ವಹಣಾ ಉಸ್ತುವಾರಿ) ಆಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಇಲ್ಲಿನ ಏರ್ ಹೆಡ್ಕ್ವಾರ್ಟರ್ಸ್ನಲ್ಲಿ (ವಾಯು ಭವನ) ಅಧಿಕಾರ ಸ್ವೀಕರಿಸಿದ ನಂತರ ಏರ್ ಮಾರ್ಷಲ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಅರೋರಾ ಅವರು 1986ರ ಆಗಸ್ಟ್ನಲ್ಲಿ ಐಎಎಫ್ನ ಏರೋನಾಟಿಕಲ್ ಎಂಜಿನಿಯರಿಂಗ್ ಸ್ಟ್ರೀಮ್ನಲ್ಲಿ ಕರ್ತವ್ಯಕ್ಕೆ ಸೇರಿದ್ದರು. ತಮ್ಮ 38 ವರ್ಷಗಳ ವೃತ್ತಿಜೀವನ ದಲ್ಲಿ ಪ್ರಮುಖ ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಏರ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಡೈರೆಕ್ಟರ್ ಜನರಲ್ (ವಿಮಾನ) ಆಗಿದ್ದರು.