ಕಾಸರಗೋಡು: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯ ಹಾಗೂ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾರ್ಚ್ 27ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಅಂಗವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ ), ಕನ್ನಡ ಗ್ರಾಮ ಕಾಸರಗೋಡು ಹಾಗೂ ವಿ. ಕೆ. ಎಂ ಕಲಾವಿದರು(ರಿ )ಬೆಂಗಳೂರು ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕವಿ,ಸಾಹಿತಿಗಳು, ಮುಖ್ಯ ಅತಿಥಿಗಳು, ಕನ್ನಡ ವಿದ್ಯಾರ್ಥಿಗಳಿಗೆ ನೀಡಲು ಪುಸ್ತಕ ಹಬ್ಬ , ಪುಸ್ತಕ ದಾನ- ಶ್ರೇಷ್ಠದಾನ ಸಾಹಿತ್ಯ ಪುಸ್ತಕಗಳ ಕೊಡುಗೆಗಳಿಗೆ ಆಹ್ವಾನದನ್ವಯ ಬೆಳ್ತಂಗಡಿಯ ಮೂಲದ ಮಹಾರಾಷ್ಟ್ರಕಲ್ಯಾಣ್ ನಿವಾಸಿ ಲೇಖಕಿ,ಕವಯತ್ರಿ, ಕುಮುದಾ. ಡಿ. ಶೆಟ್ಟಿ ಅವರು 38 ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಬೆಳ್ಳಿ ಹಬ್ಬ ವರ್ಷದ ನೆನಪಿಗಾಗಿ 60 ಕನ್ನಡ ಶಾಲಾ ಕಾಲೇಜುಗಳ ಗ್ರಂಥ ಭಂಡಾರಗಳಿಗೆ ನಾಡಿನ ಕವಿ, ಸಾಹಿತಿ,ಲೇಖಕರು, ಬರಹಗಾರರು, ಮಾಧ್ಯಮದವರು, ಪ್ರಕಾಶಕರು ಹಾಗೂ ಸಂಘ ಸಂಸ್ಥೆಗಳು, ಮಠ,ಆಶ್ರಮ, ದೇವಸ್ಥಾನಗಳ ಮೂಲಕ ಉದಾರವಾಗಿ ನೀಡಿದ ಸಾಹಿತ್ಯ ಕೃತಿಗಳನ್ನು ಪುಸ್ತಕ ಹಬ್ಬ,ಪುಸ್ತಕದಾನ-ಶ್ರೇಷ್ಠ ದಾನ ಯೋಜನೆಯನ್ವಯ ಗ್ರಂಥಗಳನ್ನು ಹಸ್ತಾಂತರಿಸಲಾಗುವುದು.
ಕಾಸರಗೋಡು ಕನ್ನಡ ಗ್ರಾಮದ ಪುಸ್ತಕ ಹಬ್ಬ, ಪುಸ್ತಕದಾನ-ಶ್ರೇಷ್ಠದಾನ ಯೋಜನೆಗೆ ಸಾಹಿತ್ಯ ಕೃತಿಗಳು, ಪುಸ್ತಕಗಳನ್ನು ನೀಡಿ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

