HEALTH TIPS

ಮಹಾರಾಷ್ಟ್ರ: ಲೋಕಸಭೆ-ವಿಧಾನಸಭೆ ಚುನಾವಣೆ ನಡುವೆ 70 ಲಕ್ಷ ಮತದಾರರು; ರಾಹುಲ್

ನವದೆಹಲಿ: ಹಿಮಾಚಲ ಪ್ರದೇಶದ ಜನಸಂಖ್ಯೆಗೆ ಸಮನಾದ 70 ಲಕ್ಷದಷ್ಟು ಮತದಾರರನ್ನು ಮಹಾರಾಷ್ಟ್ರದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ನಡುವೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಈ ಸಂಬಂಧ ಚುನಾವಣಾ ಆಯೋಗವು ಅಂಕಿ ಅಂಶ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಮಹಾಯುತಿ ಬಣಕ್ಕೆ ಅಭೂತಪೂರ್ವ ಗೆಲುವು ಸಿಕ್ಕ ಮಹಾರಾಷ್ಟ್ರದ ವಿಧಾನಸಭಾ ಚುನಾವಣಾ ಸಮಗ್ರತೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಕುರಿತಂತೆ ವಿಪಕ್ಷಗಳು ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗ ನೀಡುವುದಿಲ್ಲ ಎಂಬುದರ ಬಗ್ಗೆ ನನಗೆ ಖಚಿತತೆ ಇದೆ ಎಂದಿದ್ದಾರೆ.

ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡಿದ ಅವರು, ನಮ್ಮ ಜನರ ಮತ ಮತ್ತು ಮತದಾನಕ್ಕೆ ಸುರಕ್ಷತೆ ಇರದಿದ್ದರೆ, ಸಂವಿಧಾನಕ್ಕೆ ಬೆಲೆ ಇರುವುದಿಲ್ಲ ಎಂದಿದ್ದಾರೆ.

'ಈಗ, ನಾನು ಈ ಸದನದ ಗಮನಕ್ಕೆ ಮಹಾರಾಷ್ಟ್ರ ಚುನಾವಣೆಗಳ ಕುರಿತಾದ ಕೆಲವು ದತ್ತಾಂಶಗಳನ್ನು ತರಲು ಬಯಸುತ್ತೇನೆ. ಇಂಡಿಯಾ ಬಣ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೀಟು ಗೆದ್ದ ಲೋಕಸಭೆ ಚುನಾವಣೆ ಮತ್ತು ಮಹಾಯುತಿ ಒಕ್ಕೂಟ ಅಧಿಕಾರಕ್ಕೆ ಬಂದ ವಿಧಾನಸಭಾ ಚುನಾವಣೆಗಳ ನಡುವೆ, ಹಿಮಾಚಲದ ಜನಸಂಖ್ಯೆಗೆ ಸಮಾನವಾದ 70 ಲಕ್ಷ ಮತದಾರರನ್ನು ಮಹಾರಾಷ್ಟ್ರದ ಮತದಾರರ ಪಟ್ಟಿಗೆ ಸೇರಿಸಲಾಗಿದೆ'ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಜೂನ್‌ನಲ್ಲಿ ನಡೆದ ಲೋಕಸಭೆ ಚುನಾವಣೆ ಮತ್ತು ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಗಳ ನಡುವೆ ಸುಮಾರು 70 ಲಕ್ಷ ಮತದಾರರು ಇದ್ದಕ್ಕಿದ್ದಂತೆ ಮತದಾರರ ಪಟ್ಟಿಗೆ ಆಗಮಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವಿನ ಐದು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಐದು ವರ್ಷಗಳಲ್ಲಿ ಸೇರ್ಪಡೆಗೊಂಡ ಮತದಾರರಿಗಿಂತಲೂ ಹೆಚ್ಚು ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

'ನಾನು ಆರೋಪ ಮಾಡುತ್ತಿಲ್ಲ, ಲೋಕಸಭೆ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ಹಿಮಾಚಲದ ಜನಸಂಖ್ಯೆಗೆ ಸಮನಾದ್ಟು ಮತದಾರರು ಮ್ಯಾಜಿಕ್ ರೀತಿ ಸೇರ್ಪಡೆಗೊಂಡಿದ್ದರಿಂದ ಏನೋ ಸಮಸ್ಯೆ ಇದಂತಿದೆ ಎಂದು ಹೇಳುತ್ತಿದ್ದೇನೆ'ಎಂದು ಅವರು ಹೇಳಿದ್ದಾರೆ.

'ದಯವಿಟ್ಟು ಲೋಕಸಭೆಯ ಮತದಾರರ ಪಟ್ಟಿ ಮತ್ತು ವಿಧಾನಸಭಾ ಮತದಾರರ ಪಟ್ಟಿಯನ್ನು ನೀಡಿ. ಮತದಾರರ ಹೆಸರು ಮತ್ತು ವಿಳಾಸಗಳನ್ನು ನೀಡಿ ಎಂದು ನಾವು ಚುನಾವಣಾ ಆಯೋಗಕ್ಕೆ ಪದೇ ಪದೇ ಮನವಿ ಮಾಡಿದ್ದೇವೆ. ಲೋಕಸಭೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವಿವಿಧ ಬೂತ್‌ಗಳಲ್ಲಿ ಮತದಾನ ಮಾಡಿದ ಈ ಮತದಾರರು ಯಾರು ಎಂದು ನಾವು ಲೆಕ್ಕಾಚಾರ ಮಾಡಬಹುದು'ಎಂದು ರಾಹುಲ್ ಹೇಳಿದ್ದಾರೆ.

ಅಲ್ಲದೆ, ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲೇ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries