ಕೊಟ್ಟಾಯಂ: ವಾಹನ ಹೊಗೆ ಪರೀಕ್ಷಾ ವೆಬ್‍ಸೈಟ್ ಕಾರ್ಯ ಸ್ಥಗಿತಗೊಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಹೊಗೆ ಪರೀಕ್ಷಾ ಕೇಂದ್ರಗಳು ನಿಶ್ಚಲವಾಗಿದೆ.
ವಾಹನ ಸ್ಮೋಕ್ ಸಾಫ್ಟ್‍ವೇರ್‍ನಲ್ಲಿನ ದೋಷ ಸಮಸ್ಯೆ ಸೃಷ್ಟಿಸಿದೆ. ಪರಿವಾಹನ್ ವೆಬ್‍ಸೈಟ್ ಸತತ ನಾಲ್ಕು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರೊಂದಿಗೆ, ಅನೇಕ ವಾಹನ ಮಾಲೀಕರು ಮಾಲಿನ್ಯ ಪ್ರಮಾಣಪತ್ರ ;ಭಿಸದೆ ತೊಂದರೆಗೊಳಗಾಗಿದ್ದಾರೆ.
ಕೇರಳ ಮೋಟಾರು ವಾಹನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವ ಬದಲು, ಅವರು ಕೇಂದ್ರ ಮೇಲ್ಮೈ ಸಾರಿಗೆ ಇಲಾಖೆಯನ್ನು ದೂಷಿಸುತ್ತಿದ್ದಾರೆ. ಮಾಲಿನ್ಯ ಪ್ರಮಾಣಪತ್ರವಿಲ್ಲದೆ ಸಂಚರಿಸಿದರೆ, ಮೋಟಾರು ವಾಹನ ಮತ್ತು ಪೋಲೀಸ್ ವಾಹನ ತಪಾಸಣೆಯ ಸಮಯದಲ್ಲಿ 2,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದು ವಾಹನ ಮಾಲೀಕರನ್ನು ಚಿಂತೆಗೀಡು ಮಾಡಿದೆ.
ದೂರುಗಳಿಗೆ ಸಂಬಂಧಿಸಿದಂತೆ ಕೇರಳದ ಎಂ.ವಿ.ಡಿ. ಅಧಿಕಾರಿಗಳು, ವಾಹನಗಳ ಹೊಗೆ ಪರೀಕ್ಷೆಗೆ ಸಾಫ್ಟ್‍ವೇರ್ ಅನ್ನು ಕೇಂದ್ರ ಮೇಲ್ಮೈ ಸಾರಿಗೆ ಇಲಾಖೆಯ ಅಡಿಯಲ್ಲಿ ಎನ್.ಐ.ಸಿ. (ರಾಷ್ಟ್ರೀಯ ಮಾಹಿತಿ ಕೇಂದ್ರ) ಅಭಿವೃದ್ಧಿಪಡಿಸಿ ನಿರ್ವಹಿಸುತ್ತದೆ ಎಂದು ಹೇಳಿದರು. ಆದ್ದರಿಂದ, ದಯವಿಟ್ಟು ಎನ್.ಐ.ಸಿ.ಯ ಕೇಂದ್ರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಎನ್.ಐ.ಸಿ. ಅÀಕಾರಿಗಳನ್ನು ಸಂಪರ್ಕಿಸಿದಾಗ, ಸಾಫ್ಟ್‍ವೇರ್ ನವೀಕರಣ ದೋಷದಿಂದಾಗಿ ವೆಬ್‍ಸೈಟ್ ಲಭ್ಯವಿಲ್ಲ ಎಂಬ ಪ್ರತಿಕ್ರಿಯೆ ಬಂದಿದೆ. ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರ ಲಭಿಸಿಲ್ಲ ಎಂದು ಅಧಿಕೃತ ಹೊಗೆ ಪರೀಕ್ಷಾ ಕೇಂದ್ರಗಳ ಸಂಘಟನಾ ಅಧಿಕಾರಿಗಳು ಹೇಳುತ್ತಾರೆ.
ಅನೇಕ ವಾಹನಗಳ ಮಾಲೀಕರು ಈಗಾಗಲೇ ತಮ್ಮ ಸಣ್ಣ ಮತ್ತು ದೊಡ್ಡ ವಾಹನಗಳಲ್ಲಿ ಹೊರಸೂಸುವಿಕೆ ಪರೀಕ್ಷೆಗೆ ಒಳಪಡಿಸಿದ ನಂತರವೂ ಮಾಲಿನ್ಯ ಪ್ರಮಾಣಪತ್ರಗಳನ್ನು ಪಡೆಯಲು ವಿಫಲರಾದ ಕಾರಣ ಭಾರಿ ದಂಡವನ್ನು ಪಾವತಿಸಬೇಕಾಗಿ ಬಂದಿದೆ. ವಾಹನಗಳಿಗೆ ಪ್ರಮಾಣಪತ್ರ ಲಭಿಸÀದ ಕಾರಣ ಅವುಗಳನ್ನು ಫಿಟ್‍ನೆಸ್ ತಪಾಸಣೆಗೆ ಹಾಜರುಪಡಿಸಲಾಗುವುದಿಲ್ಲ. ಆದ್ದರಿಂದ, ಭಾರೀ ವಾಹನ ಮಾಲೀಕರು ಸಹ ಬಿಕ್ಕಟ್ಟಿನಲ್ಲಿದ್ದಾರೆ. ಏಕೀಕೃತ ವೆಬ್‍ಸೈಟ್‍ನಿಂದಾಗಿ, ವಾಹನ ನೋಂದಣಿ ಸೇರಿದಂತೆ ಸೇವೆಗಳು ಅಡ್ಡಿಪಡಿಸಲ್ಪಟ್ಟಿವೆ.
ಆರಂಭದಿಂದಲೂ ಆನ್‍ಲೈನ್ ವ್ಯವಸ್ಥೆಯಲ್ಲಿ ಸಾಂದರ್ಭಿಕ ಅಡಚಣೆಗಳು ಉಂಟಾಗುತ್ತಿದ್ದರೂ, ಸತತ ಇಷ್ಟು ದಿನಗಳ ಕಾಲ ಸೇವೆಯಿಂದ ಹೊರಗುಳಿದಿರುವುದು ಇದೇ ಮೊದಲು. ಸಾರಿಗೆ ಸ್ಥಳದಲ್ಲಿ ಪ್ರತಿ ಹೊಗೆ ಪರೀಕ್ಷಾ ಕೇಂದ್ರದಲ್ಲಿ ವೆಬ್ ಸೈಟ್ ಒಳ ಪ್ರವೇಶಿಸಲು ಒಂದು ಕೋಡ್ ಮತ್ತು ಐಡಿ ಇದೆ. ಅದನ್ನು ತೆರೆದ ನಂತರವೇ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಬಹುದು. ಆದರೆ ಪಾಸ್‍ವರ್ಡ್ ನಮೂದಿಸಿದಾಗ, ಸೈಟ್ ಲೋಡ್ ಆಗುತ್ತಿದೆ ಮತ್ತು ತೆರೆಯುವುದಿಲ್ಲ. ಆದ್ದರಿಂದ, ಹೊಗೆ ಪರೀಕ್ಷಾ ಕೇಂದ್ರಗಳ ನಿರ್ವಾಹಕರು ವಾಹನದ ಚಿತ್ರಗಳನ್ನು ಅಪ್‍ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.



