ಕಾಸರಗೋಡು: ಮದ್ಯ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆಗಿಳಿದ ಅಬಕಾರಿ ಅಧಿಕಾರಿಗಳಿಗೆ ಚಾಕು ಬೀಸಿ ಪರಾಕ್ರಮ ತೋರಿಸಿರುವುದಲ್ಲದೆ, ಸ್ವಯಂ ಕೈಗೆ ಇರಿದು ಗಾಯಮಾಡಿಕೊಂಡಿದ್ದ ಪ್ರಕರಣ ಆರೋಪಿ, ಪೆರ್ಲ ಸನಿಹದ ಕನ್ನಟಿಕಾನ ನಿವಾಸಿ ಮೊಯ್ದೀನ್ಕುಞÂ, ಅಬಕಾರಿ ಅದಿಕಾರಿಗಳು ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ತನ್ನ ಲಾಟರಿ ಅಂಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಬಸಿದ್ದಾನೆ!
ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ನಡೆಸಿದ ಕಾಯಾಚರಣೆಯಲ್ಲಿ ಈತನ ವಶದಲ್ಲಿದ್ದ 2.52ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ನಂತರ ನ್ಯಾಯಾಲಯ ಈತನಿಗೆ ವಾರದಲ್ಲಿ ಒಂದು ದಿನದಂತೆ ಹತ್ತು ವಾರಗಳ ಕಾಲ ಅಬಕಾರಿ ಕಚೇರಿಗೆ ತೆರಳಿ ಸಹಿ ಮಾಡಬೇಕೆಂಬ ನಿಬಂಧನೆಯೊಂದಿಗೆ ಜಾಮೀನು ಮಂಜೂರುಗೊಳಿಸಿತ್ತು. ನಾಲ್ಕು ವಾರ ಕಾಲ ತೆರಳಿದ್ದ ಈತ ನಂತರ ಅಬಕಾರಿ ಅದಿಕಾರಿಗಳು ತನಗೆ ಬೆದರಿಕೆಯೊಡ್ಡುತ್ತಿದ್ದಾರೆ ಅಲ್ಲದೆ ತನ್ನ ಲಾಟರಿ ಮಾರಾಟ ಅಂಗಡಿಗೂ ತಲುಪಿ ಸಾಮಗ್ರಿ ನಾಶಗೊಳಿಸಿರುವುದಾಗಿ ಆರೋಪಿಸಿ ಸತ್ಯಾಗ್ರಹ ಕೈಗೊಂಡಿದ್ದಾನೆ.

