ಕಾಸರಗೋಡು: ಕೇರಳ ಸರ್ಕಾರದ ನಾಲ್ಕನೇ ವಾರ್ಷಿಕ ಉತ್ಸವದ ರಾಜ್ಯ ಮಟ್ಟದ ಉದ್ಘಾಟನೆಯನ್ನು `ನನ್ನ ಕೇರಳ' ಎಂಬ ಮಾದರಿಯಲ್ಲಿ ಆಯೋಜಿಸಬೇಕೆಂದು ಜಿಲ್ಲೆಯ ಉಸ್ತುವಾರಿಯ ಅರಣ್ಯ ಖಾತೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು.
ರಾಜ್ಯ ಸರ್ಕಾರದ ವಾರ್ಷಿಕ ಯಶಸ್ವಿಗೊಳಿಸಲು ರೂಪಿಸಿದ ಸಂಘಟನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಪ್ರಿಲ್ 21 ರಿಂದ 27 ರ ವರೆಗೆ ನಡೆಯುವ ಪ್ರದರ್ಶನ ಹಾಗು ಮಾರಾಟ ಮೇಳವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಇನ್ಬಾಶೇಖರ್, ಸಂಚಾಲಕ ಎಂ.ಮಧುಸೂದನನ್, ಬ್ಲಾಕ್ ಪಂಚಾಯತಿ ಅಧ್ಯಕ್ಷ ಮಾಧವನ್ ಮಣಿಯರ, ಪಂಚಾಯತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನ ಕುಮಾರಿ, ಸಿ.ವಿ.ಪ್ರಮೀಳಾ, ವಿ.ವಿ.ಸಜೀವನ್, ಎ.ಮನು ನೀಲೇಶ್ವರ, ಪಿ.ಕೆ.ಲಕ್ಷ್ಮಿ, ಎಡಿಎಂ ಪಿ.ಅಖಿಲ್, ವಿ.ಚಂದ್ರನ್, ಆರ್ಯ ಪಿ.ರಾಜ್, ಕೆ.ಎನ್.ಬಿಂದು, ಲಿಟಿ ತೋಮಸ್, ಜಿ.ಸುಧಾಕರನ್, ಎಂ.ಶ್ರೀಕುಮಾರ್, ಎ.ವಿ.ರಾಂದಾಸ್, ಪಿ.ವಿ.ವಿನೋದ್, ಕೆ.ಪಿ.ಸತೀಶ್, ಸುಧೀರ್ ಮಾತನಾಡಿದರು.

.jpg)
