ಕಾಸರಗೋಡು: ಕೆಎಸ್ಟಿ ಎಂಪ್ಲಾಯಿಸ್ ಸಂಘ್(ಬಿಎಂಎಸ್) ದ ಜಿಲ್ಲಾ ಸಮಾವೇಶ ಕಾಸರಗೋಡು ಟೌನ್ ಬ್ಯಾಂಕ್ನಲ್ಲಿ ಜರಗಿತು. ಜಿಲ್ಲಾ ಅಧ್ಯಕ್ಷ ಅನಿಲ್ ಬಿ.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ.ಮುರಳೀಧರನ್ ಉದ್ಘಾಟಿಸಿದರು.
ಎಡರಂಗ ಸರ್ಕಾರದ ಕಾರ್ಮಿಕ ನೀತಿಯನ್ನು ಪ್ರತಿಭಟಿಸಲು, ಕೆಎಸ್ಆರ್ಟಿಸಿಯನ್ನು ನಿರ್ಮೂಲನ ಮಾಡುವ ಕ್ರಮದ ವಿರುದ್ಧ ಹೋರಾಡಲು ತೀರ್ಮಾನಿಸಿತು. ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ.ಕೆ.ಪುರಂ, ಬಿಎಂಎಸ್ ಜಿಲ್ಲಾ ಅಧ್ಯಕ್ಷ ಪಿ.ಉಪೇಂದ್ರನ್, ಎನ್ಜಿಒ ಸಂಘ್ ಜಿಲ್ಲಾ ಅಧ್ಯಕ್ಷ ರಂಜಿತ್ ಕೆ, ಎನ್ಟಿಒ ಸಂಘ್ ಜಿಲ್ಲಾ ಅಧ್ಯಕ್ಷ ಕೃಷ್ಣನ್ ಮಾಸ್ತರ್, ಕೇರಳ ಪೆನ್ಶನರ್ಸ್ ಸಂಘ್ ಜಿಲ್ಲಾ ಕಾರ್ಯದರ್ಶಿ ಕುಂಞÂರಾಮನ್ ಕೇಳೋತ್, ವಾಟರ್ ಅಥೋರಿಟಿ ಸಂಘ್ ರಾಜ್ಯ ಉಪಾಧ್ಯಕ್ಷ ಮಧುಸೂದನನ್, ಬಿಪಿಇಎಫ್ ಜಿಲ್ಲಾ ಅಧ್ಯಕ್ಷ ಗೋಪಾಲಕೃಷ್ಣನ್, ಡಿಆರ್ಕೆಎಸ್ ಜಿಲ್ಲಾ ಕಾರ್ಯದರ್ಶಿ ತುಳಸೀದಾಸ್ ಮಾತನಾಡದರು.

.jpg)
