ಕಾಸರಗೋಡು: ನಗರದಿಂದ ಇತರ ರಾಜ್ಯಗಳ ಪ್ರಮುಖ ನಗರಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಅಂತಾರಾಜ್ಯ ಸಂಪರ್ಕದ ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರ ಅರಂಭಿಸುವಂತೆ ಸಿಪಿಐ ಕಾಸರಗೋಡಿನಲ್ಲಿ ನಡೆದ ಪಕ್ಷದ ಮಂಡಲ ಸಮಿತಿ ಸಮ್ಮೇಳನ ಆಗ್ರಹಿಸಿದೆ. ಜುಲೈ 11ರಿಂದ 13ರ ವರೆಗೆ ಕಸರಗೋಡು ವೆಳ್ಳರಿಕುಂಡಿನಲ್ಲಿ ನಡೆಯಲಿರುವ ಪಕ್ಷದ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಮಂಡಲ ಸಮಿತಿ ಸಮ್ಮೇಳನ ಆಯೋಜಿಸಲಾಗಿತ್ತು.
ಕಾಸರಗೋಡು ಪಂಚಾಯಿತಿಯನ್ನು ನಗರಸಭೆಯಾಘಿ ಮೇಲ್ರ್ಜೆಗೇರಿಸುವಲ್ಲಿ ಪರಮುಖ ಪಾತ್ರ ವಹಿಸಿದ್ದ ಹಾಗೂ ಅಡ್ವೈಸರಿ ಸಮಿತಿ ಅಧ್ಯಕ್ಷರಾಗಿದ್ದ ರಾಜಕೀಯ, ಸಾಂಸ್ಕøತಿಕ ವಲಯಗಳ ಮುಖಂಡ ಜಸ್ಟಿಸ್ ಯು.ಎಲ್ ಭಟ್ ಹೆಸರು ಚಿರಸ್ಥಾಯೀಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಬೀಚ್ ರಸ್ತೆಗೆ 'ಜಸ್ಟಿಸ್ ಯು.ಎಲ್ ಭಟ್ ರಸ್ತೆ'ಎಂದು ನಾಮಕರಣ ಮಾಡಬೇಖು, ಸರ್ಕಾರಿ ಆಸ್ಪತ್ರೆಗಳಲ್ಲಿ ತೆರವಾಗಿರುವ ವೈದ್ಯರ ಹಾಗೂ ಇತರ ಸಿಬ್ಬಂದಿ ಹುದ್ದೆಗಳಿಗೆ ವೈದ್ಯರ ನೇಮಕಾತಿ ನಡೆಸಬೇಕು, ಹೆದ್ದಾರಿನಿರ್ಮಾಣಕಾಮಗಾರಿಯನ್ನು ಅಪಾಯರಹಿತ ರೀತಿಯಲ್ಲಿ ಪೂರ್ತಿಘೊಳಿಸುವಂತೆ ಅಗ್ರಹಿಸಲಾಯಿತು.
ಸಿಪಿಐ ರಾಜ್ಯ ಸಮಿತಿ ಮುಖಂಡ ಸಿ.ಪಿ ಮುರಳಿ ಸಮ್ಮೇಳನ ಉದ್ಘಾಟಿಸಿದರು. ರಾಜ್ಯ ಸಮಿತಿ ಜತೆ ಕಾರ್ಯದರ್ಶಿ, ಶಾಸಕ ಇ.ಚಂದ್ರಶೇಖರನ್, ಕೆ. ಕುಞÂರಮನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ರಾಜ್ಯ ಸಮಿತಿ ಸದಸ್ಯರಾದ ಟಿ. ಕೃಷ್ಣನ್, ಗೋವಿಂದನ್ ಪಳ್ಳಿಕ್ಕಾಪಿಲ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ವಿ.ರಜನ್, ಜಿಲ್ಲ ಕಾರ್ಯಕಾರಿ ಸಮಿತಿ ಸದಸ್ಯರದ ಬಂಗಳಂ ಕುಞÂಕೃಷ್ಣನ್, ಎಂ. ಕರುಣಾಕರನ್, ವಿ.ಸುರೇಶ್‍ಬಾಬು, ಪಿ.ಪಿ ಚಾಕೋ, ರಾಧಾಕೃಷ್ಣನ್ ಪೆರುಂಬಳ ಉಪಸ್ಥಿತರಿದ್ದರು. ಮಂಡಲ ಸಮಿತಿ ನೂತನ ಕಾರ್ಯದರ್ಶಿಯನ್ನಾಗಿ ಬಿಜು ಉಣ್ಣಿತ್ತನ್ ಹಾಗೂ ಇತರ 17ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

