ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳ 22ನೇ ಚಾತುರ್ಮಾಸ್ಯ ವ್ರತಾಚರಣೆ ಗುರುಪೂರ್ಣಿಮೆ ದಿನವಾದ ಗಿರುವಾರ ಆರಂಭಗೊಂಡಿದ್ದು ಸೆ.7ರ ವರೆಗೆ ಕೊಂಡೆವೂರು ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗುರುವಾರ ಬೆಳಿಗ್ಗೆ 7.30ಕ್ಕೆ ಚಾತುರ್ಮಾಸ್ಯ ವ್ರತ ಸಂಕಲ್ಪ, 9ಕ್ಕೆ ಗಣಪತಿ ಹೋಮ, ಶ್ರೀನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ, 10.30ಕ್ಕೆ ವ್ಯಾಸ ಪೂಜಾರಂಭ, 11.45ಕ್ಕೆ ವ್ಯಾಸಪೂಜೆಯ ಮಂಗಳಾರತಿ, ಭಜನೆ ನಡೆಯಿತು. 12.30ಕ್ಕೆ ಶ್ರೀದೇವರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 5ಕ್ಕೆ ಗಾಯತ್ರೀ ಮಾತೃಮಂಡಳಿಯವರಿಂದ ಭಜನೆ, ಸಂಜೆ 6.30ಕ್ಕೆ ಮಹಾಪೂಜೆ, 7.30ಕ್ಕೆ ಶ್ರೀಗುರು ಪಾದುಕಾ ಪೂಜೆ, ಗುರುಗಳ ಆಶೀರ್ವಚನ, ಅನುಗ್ರಹ ಮಂತ್ರಾಕ್ಷತೆ ನಡೆಯಿತು.

.jpg)
.jpg)
.jpg)
.jpg)
