ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ "ಕೇರಳ -ಕರ್ನಾಟಕ ಕನ್ನಡ ನುಡಿ ಸಂಭ್ರಮ "ಕಾರ್ಯಕ್ರಮ ದಲ್ಲಿ, ಕನ್ನಡ ಭವನ ಸಂಸ್ಥಾಪಕ ಡಾ. ವಾಮನ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗೆ ಗಡಿನಾಡ ಶ್ರೇಷ್ಠ ಕನ್ನಡಿಗ "ಪ್ರಶಸ್ತಿ ನೀಡಿ ಗೌರವಿಸಲಾಯಿತು
ಬೆಂಗಳೂರಿನ ಡಾ. ಸುಷ್ಮಾ ಶಂಕರ್ ಸಾರತ್ಯದ "ತೊದಲ್ನುಡಿ "ಮಾಸಪತ್ರಿಕೆ ವತಿಯಿಮದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪತ್ರಕರ್ತೆ ಮೇರಿ ಜೋಸೆಫ್, ಡಾ. ಸುಷ್ಮಾ ಶಂಕರ್, ಡಾ ಬಾಲಕೃಷ್ಣ ಎಸ್ ಮದ್ದೋಡಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಶಂಕರ್, ಯೋಗ ಆಚಾರ್ಯ ಶ್ರೀ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.


