ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಲು ಅಧಿಕಾರಿ ಮಟ್ಟದ ಅವಲೋಕನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರರುಗಿತು.
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವೈದ್ಯಕೀಯ ಕಾಲೇಜು ಆಸ್ಪತ್ರೆ ಬ್ಲಾಕ್‍ಗಳ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸುವುದರ ಜತೆಗೆ ಕಾಂಗರಿ ಶೀಗ್ರ ಪೂರ್ತಿಗೊಳಿಸಬೇಖು. ವೈದ್ಯಕೀಯ ಕಾಲೇಜಿನೊಳಗಿನ ಪ್ರಯೋಗಾಲಯ ಸೌಲಭ್ಯಗಳು, ಹಾಸ್ಟೆಲ್, ಕ್ವಾರ್ಟರ್ಸ್, ವೈದ್ಯಕೀಯ ಕಾಲೇಜಿನೊಳಗಿನ ಭದ್ರತಾ ವ್ಯವಸ್ಥೆಯನ್ನೂ ಸುಧಾರಿಸಬೇಕು. ತಾಂತ್ರಿಕ ಸೌಲಭ್ಯ, ಪ್ರಯಾಣ ಸೌಲಭ್ಯ, ಕ್ಯಾಂಟೀನ್ ಇತ್ಯಾದಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಪ್ರತಿಯೊಂದು ವಿಷಯಗಳ ಬಗ್ಗೆ ಜವಾಬ್ದಾರಿ ಹೊಂದಿರುವ ಅಧಿಕಾರಿಗಳಲ್ಲಿ ಸಚಿವರು ಪ್ರತ್ಯತೇಕವಾಗಿ ಮಾತುಕತೆನಡೆಸಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶಕ ಕೆ.ವಿ.ವಿಶ್ವನಾಥನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಕಾಸರಗೋಡು ಅಭಿವೃದ್ಧಿ ಯೋಜನೆ(ಕೆಡಿಪಿ) ವಿಶೇಷ ಅಧಿಕಾರಿ ವಿ.ಚಂದ್ರನ್, ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲೆ ಡಾ. ಪಿ. ಇಂದೂ, ವೈದ್ಯಕೀಯ ಕಾಲೇಜು ಅಧೀಕ್ಷಕ ಆರ್. ಪ್ರವೀಣ್, ಕೆಎಂಎಸ್‍ಸಿಎಲ್ ಜನರಲ್ ಮ್ಯಾನೇಜರ್ ಡಾ. ಅರುಣ್, ಕಿಟ್ಕೊ ಪ್ರತಿನಿಧಿ ಟಾಮ್ ಜೋಸ್, ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ. ರಾಜಮೋಹನ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


