ಕಾಸರಗೋಡು: ಭಾರತೀಯ ಮಜ್ದೂರ್ ಸಂಘ ಎಣ್ಮಕಜೆ ಪಂಚಾಯಿತಿ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ ಅ. 5ರಂದು ಪಂಚಾಯಿತಿ ವ್ಯಾಪ್ತಿಯ ವಿವಿಧ ಕೇಂದ್ರಗಳಲ್ಲಿ ಜರುಗಲಿದೆ. ಕೇರಳದ ಎಡರಂಗ ಸರ್ಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಕೇರಳದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಿರುವ ಕಾಲ್ನಡೆ ಜಾಥಾ ಅಂಗವಾಘಿ ಎಣ್ಮಕಜೆ ಪಂಚಾಯಿತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಕಾಟುಕುಕ್ಕೆಯಲ್ಲಿ ಕಾಲ್ನಡೆ ಜಾಥಾ ಉದ್ಘಾಟನೆ ನಡೆಯುವುದು. 11.30ಕ್ಕೆ ಅಡ್ಕಸ್ಥಳ, ಮಧ್ಯಾಹ್ನ 12ಗಂಟೆಗೆ ನಲ್ಕ ಹಾಗೂ 1ಗಂಟೆಗೆ ಪೆರ್ಲ ಪೇಟೆಯಲ್ಲಿ ಕಾಲ್ನಡೆಜಾಥಾ ಸಮಾರೋಪ ನಡೆಯುವುದು.

