HEALTH TIPS

ಯುವಕನ ಎರಡೂ ಮೂತ್ರಪಿಂಡ ವಿಫಲ-ಚಿಕಿತ್ಸೆಗಾಗಿ ನೆರವು ಯಾಚಿಸಿದ ಸಮಿತಿ

ಕಾಸರಗೋಡು: ಎರಡೂ ಮೂತ್ರಪಿಂಡಗಳು ವಿಫಲವಾಗಿ ಗಂಭೀರ ಆರೋಗ್ಯ ಸಮಸ್ಯೆಯಿಮದ ಬಳಲುತ್ತಿರುವ ಚಂದ್ರಾಪುರಂ ಎರೋಲ್ ಮೋಟ್ಟಮ್ಮಲ್ ನಿವಾಸಿ ಭಾನುಮತಿ ಅವರ ಪುತ್ರ, ಪೇಂಟಿಂಗ್ ಕಾರ್ಮಿಕ  ಟಿ.ವಿ.ಬಿನೀಶ್ (34)ಚಿಕಿತ್ಸೆಗಾಗಿ ಸಾರ್ವಜನಿಕರ ಸಹಕಾರ ಯಾಚಿಸುತ್ತಿದ್ದಾರೆ. ನಿರಂತರ ಡಯಾಲಿಸಿಸ್‍ಗೆ ಒಳಗಾಗುತ್ತಿರುವ ಯುವಕನ ಜೀವ ಉಳಿಸಲು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದು, ಚಿಕಿತ್ಸೆಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗುವ ನಿರೀಕ್ಷೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. 

ತಂದೆ ಕುಟುಂಬ ತ್ಯಜಿಸಿ ವಾಸಿಸುತ್ತಿದ್ದು, ತಾಯಿ ಮತ್ತು ಸಹೋದರನನ್ನು ಒಳಗೊಂಡ ಬಡ ಕುಟುಂಬ ಈ ಭಾರೀ ಮೊತ್ತ ಭರಿಸಲಾಗದಿರುವುದರಿಂದ ಉದಾರ ಸಹಾಯ ಂiÀiಶೀರ್ವಚನ .  ಚಿತ್ರಕಲಾವಿದರಾಗಿರುವ ಇವರ ಸಹೋದರ ವಿನೀತ್ ವೃದ್ಧ ಮಾತೆಯನ್ನು ಪೋಷಿಸುವುದರ ಜತೆಗೆ ಅಸೌಖ್ಯಪೀಡಿತ ಸಹೋದರನ ಆರೈಕೆಗಾಘಿ ಮನೆಯಲ್ಲಿರಬೇಕಾಗಿರುವುದರಿಂದ ಕೆಲಸಕ್ಕೂ ತೆರಳಲಾಗದ ಸ್ಥಿತಿಯಿದೆ. 

ಸಹೋದರನ ಚಿಕಿತ್ಸೆಗಾಗಿ ಮೊತ್ತ ಸಂಗ್ರಹಿಸಲು ಎಲ್ಲಾ ರಾಜಕೀಯ ಪಕ್ಷಗಳು, ಸಾಮಾಜಿಕ-ಸಾಂಸ್ಕøತಿಕ ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯರ ನೇತೃತ್ವದಲ್ಲಿ ಬಿನೀಶ್ ವೈದ್ಯಕೀಯ ಸಹಾಯ ಸಮಿತಿಯನ್ನು ರಚಿಸಲಾಗಿದೆ. ಉದುಮ ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷ,  ವಾರ್ಡ್ ಸದಸ್ಯೆ ಸಿಂಧು ಗಂಗಾಧರನ್ ಕಾರ್ಯಾಧ್ಯಕ್ಷೆ, ಎನ್.ಜಿ.ವಿಜಯನ್ ಸಂಚಾಲಕರಾಗಿ, ವೈ.ವೇಲಾಯುಧನ್ ಕೋಶಾಧಿಕಾರಿಯಾಗಿ ಪಾಲಕುನ್ನು ಕೇಂದ್ರೀಕರಿಸಿ ಚಿಕಿತ್ಸಾ ನೆರವು ಸಮಿತಿ ರಚಿಸಲಾಗಿದೆ. ಕೇರಳ ಗ್ರಾಮೀಣ ಬ್ಯಾಂಕಿನ ತ್ರಿಕ್ಕನ್ನಾಡು ಶಾಖೆಯಲ್ಲಿ ಖಾತೆಯನ್ನು ತೆರೆಯಲಾಗಿದೆ. ಬಿನೀಶ್ ಅವರ ಚಿಕಿತ್ಸೆಗೆ ನೆರವಾಗುವಂತೆ ಸಮಿತಿ ವಿನಂತಿಸಿದೆ.

NAME: BINISH T V CHIKITHSA SAHAYA COMMITTEE

Bank: KERALA GRAMIN BANK 

Branch : TRIKKANAD

Account number:

40469101045338

IFSE CODE : KLGB0040469




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries