ಕುಂಬಳೆ: ಭಾಗವತ ದಿ.ಶೇಡಿಗುಮ್ಮೆ ಕೃಷ್ಣ ಭಟ್ಟರ ಜನ್ಮಶತಾಬ್ದಿ ಸಮಾರಂಭ ಡಿ.28 ರಂದು ಭಾನುವಾರ ಯಕ್ಷಗಾನ ತಾಳಮದ್ದಳೆ, ಕೃತಿ ಬಿಡುಗಡೆ ಸಮಾರಂಭಗಳೊಮದಿಗೆ ಅನಂತಪುರ ಶ್ರೀಅನಂತಪದ್ಮನಾಭ ದೇವಸ್ಥಾನದ ಅನಂತಶ್ರೀ ಸಭಾ ಭವನದಲ್ಲಿ ಬೆಳಿಗ್ಗೆ 9. ರಿಂದ ನಡೆಯಲಿದೆ.
ಬೆಳಿಗ್ಗೆ 9 ಕ್ಕೆ ಸಮಾರಂಭವನ್ನು ಡಾ.ಎಸ್.ಬಿ.ಸುಳ್ಯ ದೀಪ ಬೆಳಗಿಸಿ ಚಾಲನೆ ನೀಡುವರು. ಬಳಿಕ ನಡೆಯುವ ಕರ್ಣಪರ್ವ ತಾಳಮದ್ದಳೆ ಕೂಟದಲ್ಲಿ ಹೊಸಮೂಲೆ ಗಣೇಶ ಭಟ್,ಲಕ್ಷ್ಮೀಶ ಬೇಂಗ್ರೋಡಿ, ಪುಂಡಿಕಾಯಿ ರಾಜೇಂದ್ರ ಪ್ರಸಾದ, ಕೃಷ್ಣಮೂರ್ತಿ ಪಾಡಿ ಹಿಮ್ಮೇಳದಲ್ಲಿ ಸಹಕರಿಸುವರು. ರಾಧಾಕೃಷ್ಣ ಕಲ್ಚಾರ್, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಶೇಣಿ ವೇಣುಗೋಪಾಲ ಭಟ್, ಗಣರಾಜ ಕುಂಬ್ಳೆ, ಉದಯಶಂಕರ ಭಟ್ ಮಜಲು ಹಾಗೂ ಗೋಪಾಲಕೃಷ್ಣ ನಾಯಕ್ ಸೂರಂಬೈಲು ಮುಮ್ಮೇಳದಲ್ಲಿ ಪಾತ್ರಗಳನ್ನು ನಿರ್ವಹಿಸುವರು.
11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಭಟ್ ಕಬೆಕ್ಕೋಡು ಅಧ್ಯಕ್ಷತೆ ವಹಿಸುವರು. ಹರಿದಾಸ, ನ್ಯಾಯವಾದಿ ಮಹಾಬಲ; ಶೆಟ್ಟಿ ಕೂಡ್ಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಗಣರಾಜ ಕುಂಬ್ಳೆ ಸಂಸ್ಮರಣಾ ನುಡುಗಳನ್ನಾಡುವರು. ಶೇಡಿಗುಮ್ಮೆ ವಾಸುದೇವ ಭಟ್, ಪಿ.ಪರಮೇಶ್ವರಿ ಐ.ಭಟ್, ಎಸ್.ಕೆ.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಹಾರೈಸುವರು. ಅಖಿಲಾ ಕಬೆಕ್ಕೋಡು, ಅಕ್ಷತಾ ನವೀನ್, ಸರಸ್ವತಿ ಶಂಕರ್, ಎಸ್.ಕೆ.ಸದಾಶಿವ ಭಟ್, ಉದಯ ಶಂಕರ ಭಟ್ ಮಜಲು ಮೊದಲಾದವರು ಉಪಸ್ಥಿತರಿರುವರು. ಬಳಿಕ ತಾಳಮದ್ದಳೆಯ ಉತ್ತರಾರ್ಧ, ಭೋಜನ ಕೂಟ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


