HEALTH TIPS

ಪಾವಳದಲ್ಲಿ ಪ್ರೀಮಿಯರ್ ಲೀಗ್ ಸೀಸನ್ 2 ವಾಲಿಬಾಲ್ ಟೂರ್ನಮೆಂಟ್ ಉದ್ಘಾಟನೆ

ಮಂಜೇಶ್ವರ: ವರ್ಕಾಡಿ ಪಾವಳದಲ್ಲಿ ಪ್ರೀಮಿಯರ್ ಲೀಗ್ ಸೀಸನ್ 2 ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ಪಾವಳ ಲೈಬ್ರೆರಿ ಅಧ್ಯಕ್ಷ ಧಾರ್ಮಿಕ, ಸಾಮಾಜಿಕ ಮುಂದಾಳು ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ಉದ್ಘಾಟಿಸಿ, ಪಂದ್ಯಾಟದಲ್ಲಿ ಬಹುಮಾನ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂಬುವುದನ್ನು ಎಲ್ಲಾ ಸ್ಪರ್ಧಿಗಳು ಮೊದಲು ಅರಿತುಕೊಳ್ಳಬೇಕು. ಪಾವಳ ಸಂತೋಷ್ ಫ್ರೆಂಡ್ಸ್ ಕ್ಲಬ್ ಕ್ರೀಡಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವುದು ಗತಕಾಲದ ನೆನಪುಗಳನ್ನು ಮರುಸ್ಥಾಪಿಸಿದಂತಾಗಿದೆ. ಇದೀಗ ಮತ್ತೊಮ್ಮೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವನ್ನು ನಡೆಸಿರುವುದು ಸ್ಥಳೀಯರಲ್ಲಿ ನವಚೇತನವನ್ನು ಮೂಡಿಸಿದೆ. ಅದರಲ್ಲೂ ಮಹಿಳಾ ಮಣಿಗಳು ವಾಲಿಬಾಲ್ ನತ್ತ ಆಕರ್ಷಿತರಾಗುತ್ತಿರುವುದು ಹೆಮ್ಮಯ ವಿಷಯವಾಗಿದೆ ಎಂದರು.

ತಂಡಗಳ ನಾಯಕರಾದ ಲೋಕೇಶ್ ಪಾವಳ, ರೋಶನ್‍ಲಾಲ್, ಕ್ಲಬ್‍ನ ಸದಸ್ಯ ಮೋಹನ್ ಕೂಟತ್ತಜೆ, ಹೊಸದಿಗಂತ ಪತ್ರಿಕೆಯ ಪ್ರತಿನಿಧಿ ಜಗನ್ನಾಥ ಶೆಟ್ಟಿ ಪಾವಳ ಗುತ್ತು, ಕೇಶವ ಪಾವಳ ಮೊದಲಾದರು ಜೊತೆಗಿದ್ದು ಪಂದ್ಯಾಟದಲ್ಲಿ ಸಹಕರಿಸಿದರು. ಒಟ್ಟು 5 ತಂಡಗಳು ಪಂದ್ಯಾಟದಲ್ಲಿ ಸ್ಪರ್ಧಿಸಿ ದ್ದವು. ವಿಜಯಕುಮಾರ್ ಪಾವಳ, ಲೋಕೇಶ್ ಪಾವಳ, ದಿನೇಶ್ ಕೊಂದಲ ಕುಮೇರು, ಶರಣ್ ಪಾವಳ, ರೋಶನ್ ಲಾಲ್ ಕೊಂದಲಕುಮೇರು ಮತ್ತಿತರರು ತಂಡಗಳನ್ನು ಮುನ್ನಡೆಸಿದರು.ಕ್ಲಬಿನ ಅಧ್ಯಕ್ಷರಾದ ಕಿಶೋರ್ ಕುಮಾರ್ ಪಾವಳ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries