ಈರಾಟ್ಟುಪೆಟ್ಟಾ: ಪರೀಕ್ಷಾ ಹಾಲ್‍ನಲ್ಲಿ ಅನುಮಾನ ಕೇಳಿದ 5ನೇ ತರಗತಿ ವಿದ್ಯಾರ್ಥಿಗೆ ಹೊಡೆದು ಭುಜ ಮುರಿತಕ್ಕೊಳಗಾದ ಘಟನೆ ನಡೆದಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಪಾಲಾ ಮುತ್ತೋಳಿ ಮೂಲದ ಮತ್ತು ಸಮಾಜ ವಿಜ್ಞಾನ ಶಿಕ್ಷಕ ಜೋಸೆಫ್ ಎಂ. ಜೋಸ್ ವಿರುದ್ಧ ದೂರು ದಾಖಲಾಗಿದೆ.
ಈರಾಟ್ಟುಪೆಟ್ಟಾದಲ್ಲಿರುವ ಕರಕ್ಕಾಡ್ ಎಂ.ಎಂ.ಎಂ.ಯು.ಎಂ.ಯು.ಪಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಗುರುವಾರ ಥಳಿಸಲಾಯಿತು. ಭುಜ ಮುರಿದ ಮಗುವಿಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದ ಅನುಮಾನ ಕೇಳಿದಾಗ ಶಿಕ್ಷಕ ಮಗುವಿನ ಭುಜಕ್ಕೆ ಪೆಟ್ಟು ಕೊಟ್ಟಿದ್ದಾನೆ. ತರಗತಿಯಲ್ಲಿ ಅಳುವ ಶಬ್ದ ಕೇಳಿ ಆತನ ಸಹಪಾಠಿಗಳು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶಾಲೆಯಿಂದ ಸುಸ್ತಾಗಿ ಮನೆಗೆ ಬಂದ ವಿದ್ಯಾರ್ಥಿಯನ್ನು ಪೆÇೀಷಕರು ಆಸ್ಪತ್ರೆಗೆ ಕರೆದೊಯ್ದರು.
ಭುಜದ ಎಕ್ಸ್-ರೇ ತೆಗೆದಾಗ ಮೂಳೆ ಮುರಿದಿರುವುದು ಬೆಳಕಿಗೆ ಬಂದಿದೆ. ಪೆÇೀಷಕರ ದೂರಿನ ಮೇರೆಗೆ ಈರಾಟ್ಟುಪೆಟ್ಟಾ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

