ಕಾಸರಗೋಡು: ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 2025 ರಲ್ಲಿ ನಡೆದ ಕೆ –ಟೆಟ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪ್ರಮಾಣಪತ್ರ ಪರಿಶೀಲನೆಯು ಡಿಸೆಂಬರ್ 26 ಮತ್ತು 27 ರಂದು ನಡೆಯಲಿದೆ.ಕೆಟಗಿರಿ I ಮತ್ತು II ದಿನಾಂಕ 26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ಗಂಟೆಯವರೆಗೆ ಹಾಗೂ ಕೆಟಗಿರಿ III ಮತ್ತು IV ದಿನಾಂಕ 27 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ.ಕಳೆದ ಮೂರು ವರ್ಷಗಳಲ್ಲಿ ಕೆ –ಟೆಟ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಮಾಣಪತ್ರ ಪರಿಶೀಲನೆಯನ್ನು ಪೂರ್ಣಗೊಳಿಸದವರು ಸಹ ಪ್ರಮಾಣಪತ್ರ ಪರಿಶೀಲನೆಗೆ ಹಾಜರಾಗಬಹುದು. ಅರ್ಹ ಅಭ್ಯರ್ಥಿಗಳು ಹಾಲ್ ಟಿಕೆಟ್, ಮೂಲ ಪ್ರಮಾಣಪತ್ರಗಳು, ಅಂಕ ಪಟ್ಟಿ ಫಲಿತಾಂಶದ ಹಾಳೆ ಮತ್ತು ಅಂಕ ಸಡಿಲಿಕೆ ಪಡೆದವರ ಪ್ರಮಾಣಪತ್ರ ಮತ್ತು ಪ್ರತಿಗಳೊಂದಿಗೆ ಕಾಸರಗೋಡು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಹಾಜರಾಗಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ - 04994 230053 ಗೆ ಸಂಪರ್ಕಿಸಬಹುದು.

