HEALTH TIPS

ಬದಿಯಡ್ಕ ಗ್ರಾಮ ಪಂಚಾಯತಿ ಅಭಿವೃದ್ಧಿ ಸೆಮಿನಾರ್

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ವಾರ್ಷಿಕ ಯೋಜನೆ 2026-27ನೇ ಅಭಿವೃದ್ಧಿ ಸೆಮಿನಾರ್ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಶನಿವಾರ ಜರಗಿತು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿನ ನೂತನ ಆಡಳಿತ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಜನಪ್ರತಿನಿಧಿಗಳು ಉತ್ತಮ ಬಾಂಧವ್ಯದೊಂದಿಗೆ ನಾಡಿನ ಅಭಿವೃದ್ಧಿಗಾಗಿ ಮುನ್ನಡಿಯಿಟ್ಟಿರುವುದು ಅಭಿಮಾನದ ವಿಚಾರ. ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿದಾಗ ಅಲ್ಲಿ ಏಕತೆ, ಬಲ ಬರುತ್ತದೆ ಎಂದರು. 

ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯಿತಿನ ಸಮಗ್ರ ವಿಕಾಸಕ್ಕೆ ಬೇಕಾದ ವಿವಿಧ ಯೋಜನೆಗಳನ್ನು ರೂಪೀಕರಿಸಲಾಗಿದೆ. ನಾಡಿನ ಅಭಿವೃದ್ಧಿಯಲ್ಲಿ ಯಾವುದೇ ಕುಂದುಕೊರತೆಗಳು ಬಾರದಂತೆ ಮುಂದುವರಿಯುತ್ತೇವೆ ಎಂದರು. 

ಯೋಜನಾ ಸಮಿತಿ ಸಮಿತಿ ಉಪಾಧ್ಯಕ್ಷ ಅನ್ವರ್ ಓಸೋನ್ ವಿಷಯ ಮಂಡನೆ ಮಾಡಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಅವಿನಾಶ್ ರೈ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಹರೀಶ ಮಜಿರ್ಪಳ್ಳಕಟ್ಟೆ, ಶ್ಯಾಮಪ್ರಸಾದ ಸರಳಿ, ಅನ್ನತ್ ಬೀವಿ, ಲೀಲಾವತಿ, ಉಷಾ ಪಳ್ಳತ್ತಡ್ಕ, ಮಧುಸೂದನ ಕಂಗಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಫಾತಿಮ್ಮತ್ ಫೌಸಿಯಾ, ಶಾಹಿನಾ ಅನ್ವರ್, ಗಂಗಾಧರ ಗೋಳಿಯಡ್ಕ, ಸುಬೈದ, ಪ್ರಜ್ಞಾ, ಶ್ಯಾಮಪ್ರಸಾದ ಮಾನ್ಯ, ಬಿಂದ್ಯಾ, ಅಶ್ವತಿ, ಮಾಹಿನ್ ಕೇಳೋಟ್ ಪಾಲ್ಗೊಂಡು ಶುಭಹಾರೈಸಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಸರಿನ್ ಎ.ಕೆ. ಸ್ವಾಗತಿಸಿ, ಸಹಾಯಕ ಕಾರ್ಯದರ್ಶಿ ಸಜಿ ಪಿ.ಕೆ. ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries