ಬದಿಯಡ್ಕ: ಕೇರಳ ಸರ್ಕಾರ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಹೆಲ್ತಿ ಕೇರಳ ಅಭಿಯಾನದಂಗವಾಗಿ ವಾಹನ ಜಾಥಾ ಶನಿವಾರ ಕುಂಬ್ಡಾಜೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೆಶೋಧಾ ಎನ್. ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ.ಅಧ್ಯಕ್ಷತೆ ವಹಿಸಿದರು. ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ, ಅಬೂಬಕರ್, ಪಂಚಾಯಿತಿ ಸದಸ್ಯರಾದ ನೂರುದ್ದೀನ್, ಕೊರಗಪ್ಪ ಬೆಳ್ಳಿಗೆ, ಗೀತಾ ಡಿ., ಸೌಭಾಗ್ಯಲಕ್ಷ್ಮೀ, ಬಿ.ಟಿ.ಅಬ್ದುಲ್ಲ ಕುಂಞÂ್ಞ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ವಾಹನವು ಪರ್ಯಾಟನೆ ನಡೆಸಿ ಆರೋಗ್ಯ ಇಲಾಖೆಯ ಸೇವೆಗಳು, ಅಭಿವೃದ್ಧಿ ಯೋಜನೆಗಳ ವೀಡಿಯೋ ಪ್ರದರ್ಶನ ನಡೆಯಿತು. ಈ ಅಭಿಯಾನ ಫೆಬ್ರವರಿ 6 ರಿಂದ ಆರಂಭಗೊಂಡ ಜಾಥಾ ಶನಿವಾರ ಮುಕ್ತಾಯಗೊಂಡಿತು.

.jpg)
