ಅಮೆರಿಕದ ಫೆಡರಲ್ ರಿಸರ್ವ್ ನೀತಿ ಬಡ್ಡಿ ದರಗಳನ್ನು ಯಥಾ ಸ್ಥಿತಿಯಲ್ಲಿರಿಸಿದ ನಂತರ ಮತ್ತು ತೈಲ ಬೆಲೆಗಳು ಬ್ಯಾರೆಲ್ ಗೆ 110 ಡಾಲರ್ ಗಿಂತ ಹೆಚ್ಚಾದ ಮೇಲೆ ಗುರುವಾರ ಮಾರುಕಟ್ಟೆ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ತೀವ್ರ ಷೇರು ಮಾರುಕಟ್ಟೆ ಕುಸಿತದ ವರದಿಯಾಗಿದೆ.
ಐದೇ ನಿಮಿಷಗಳಲ್ಲಿ ಒಟ್ಟು 8 ಲಕ್ಷ ಕೋಟಿ ರೂ. ನಷ್ಟವಾಗಿದೆ.
ನಿಫ್ಟಿ50 ಮತ್ತು ಬಿಎಸ್‌ಇ ಸೂಚ್ಯಂಕ ವಹಿವಾಟಿನಲ್ಲಿ ಕುಸಿತ ದಾಖಲಿಸಿದವು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ 2500 ಪಾಯಿಂಟ್ ಗಳಿಗೆ ಮೀರಿ ಕುಸಿದರೆ, ನಿಫ್ಟಿ 50 ಮೂರು ಸತತ ಅವಧಿಗಳಲ್ಲಿ ಲಾಭ ದಾಖಲಿಸಿದ ನಂತರ ದಿನದ ವಹಿವಾಟಿನಲ್ಲಿ 23,200 ಅಂಕಗಳಿಗಿಂತ ಕೆಳಗೆ ಕುಸಿಯಿತು.
ಒಂದು ದಿನದ ಮೊದಲು ಬುಧವಾರ ಉತ್ಸಾಹದಿಂದ ಮಾರುಕಟ್ಟೆ ಅಮೆರಿಕದ ನೀತಿಗೆ ಅನುಗುಣವಾಗಿ ಕುಸಿತ ದಾಖಲಿಸಿದೆ. ಮಧ್ಯಾಹ್ನ 3:05ಕ್ಕೆ ನಿಫ್ಟಿ 50ಯು 789 ಪಾಯಿಂಟ್ಗಳು ಅಥವಾ ಶೇ. 3.32 ರಷ್ಟು ಕುಸಿದು 22,988.95 ಕ್ಕೆ ವಹಿವಾಟು ನಡೆಸುತ್ತಿತ್ತು. ಬಿಎಸ್ಯಿ ಸೂಚ್ಯಂಕವು 74,157.67 ಕ್ಕೆ ತಲುಪಿ 2,552 ಪಾಯಿಂಟ್ಗಳು ಅಥವಾ ಶೇ 3.33 ರಷ್ಟು ಕುಸಿತ ದಾಖಲಿಸಿದೆ.
ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ನ ಆತಂಕಕಾರಿ ನಿಲುವು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ. ತೀವ್ರ ಕುಸಿತವು ಬಿಎಸ್‌ಇ ಪಟ್ಟಿಮಾಡಿದ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣದಿಂದ 11 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನದನ್ನು ಅಳಿಸಿಹಾಕಿದೆ. ಹೀಗಾಗಿ 428 ಲಕ್ಷ ಕೋಟಿ ರೂ.ಗೆ ಇಳಿಯಿತು. ಎಲ್ಲಾ ವಲಯಗಳಲ್ಲೂ ಮಾರಾಟದ ಒತ್ತಡವು ಗೋಚರಿಸಿದೆ. ಎಲ್ಲಾ ಎನ್‌ಎಸ್‌ಇ ಸೂಚ್ಯಂಕಗಳು ಕಡಿಮೆ ಪ್ರಮಾಣದಲ್ಲಿ ಪ್ರಾರಂಭವಾದವು.
ಮತ್ತಷ್ಟು ದುರ್ಬಲಗೊಂಡ ರೂಪಾಯಿ:
ಭಾರತೀಯ ರೂಪಾಯಿ ಮತ್ತಷ್ಟು ದುರ್ಬಲಗೊಂಡು ಅಮೆರಿಕದ ಡಾಲರ್ ವಿರುದ್ಧ ದಾಖಲೆ ಕನಿಷ್ಠ ಮಟ್ಟವಾದ 92.63ಕ್ಕೆ ತಲುಪಿದೆ. "ಆಮದು ಬಿಲ್ ಏರುತ್ತಿರುವುದರಿಂದ ನಿರಂತರ ಒತ್ತಡವು ಕರೆನ್ಸಿಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯಲ್ಲಿ ನಡೆಯುತ್ತಿರುವ ಅಡಚಣೆಗಳೊಂದಿಗೆ ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಭಾರತಕ್ಕೆ ನಿರಂತರವಾಗಿ ಆಮದು ವೆಚ್ಚಗಳು ಏರುವ ಕಳವಳ ತಂದಿದೆ. ಕಚ್ಚಾ ತೈಲವು ದೀರ್ಘಕಾಲದವರೆಗೆ ಏರುತ್ತಲೇ ಇದೆ. ಹೀಗಾಗಿ ರೂಪಾಯಿ ಒತ್ತಡದಲ್ಲಿದೆ" ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ತೈಲ ಬೆಲೆ 110 ಡಾಲರ್ ದಾಟಿದೆ. ತೈಲ ಸಮೃದ್ಧ ಮಧ್ಯಪ್ರಾಚ್ಯದಲ್ಲಿ ಏರುತ್ತಿರುವ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿಯ ನಿರಂತರ ಮುಚ್ಚುವಿಕೆಯಿಂದಾಗಿ ಕಚ್ಚಾ ತೈಲ ಬೆಲೆಗಳು ಸ್ವಲ್ಪ ವಿರಾಮದ ನಂತರ 110 ಡಾಲರ್ ಗೆ ಏರಿತು. ಎನ್‌ಎನ್ಜಿ ಸಂಸ್ಕರಣೆಯ ಪ್ರಮುಖ ಕೇಂದ್ರವಾದ ರಾಸ್ ಲಫಾನ್ ಮೇಲೆ ಇರಾನ್ನ ಕ್ಷಿಪಣಿ ದಾಳಿಗಳು ಷೇರು ಮಾರುಕಟ್ಟೆಯಲ್ಲಿ ಸಂವೇದನೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಯುಎಇ ಗುರುವಾರ ಮುಂಜಾನೆ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದ ನಂತರ ಕೆಲವು ಅನಿಲ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ.
HDFC ಬ್ಯಾಂಕ್ ಷೇರುಗಳು ತೀವ್ರ ಮಾರಾಟ:
HDFC ಬ್ಯಾಂಕ್ ನ ಅರೆಕಾಲಿಕ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕ ಅತನು ಚಕ್ರವರ್ತಿ ರಾಜೀನಾಮೆ ಘೋಷಿಸಿದ ನಂತರ ಗುರುವಾರ ಆರಂಭಿಕ ವಹಿವಾಟಿನಲ್ಲಿ ಷೇರುಗಳು ಸುಮಾರು ಶೇ 8ರಷ್ಟು ಕುಸಿದವು. ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನಂತರ ಮಾಜಿ ಸಿಇಒ ಕೇಕಿ ಮಿಸ್ತ್ರಿರನ್ನು ಮಧ್ಯಂತರ ಅರೆಕಾಲಿಕ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
"ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕ್ ನ ಕೆಲವು ಬೆಳವಣಿಗೆಗಳು ಮತ್ತು ಅಭ್ಯಾಸಗಳು ತಮ್ಮ ವೈಯಕ್ತಿಕ ತತ್ವಗಳು ಮತ್ತು ನೈತಿಕ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ" ಎಂದು ಚಕ್ರವರ್ತಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ HDFC ಷೇರುಗಳಲ್ಲಿನ ತೀವ್ರ ಕುಸಿತವು ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರ ಮೇಲೂ ಕೆಳಮುಖ ಒತ್ತಡ ಬೀರುವ ಸಾಧ್ಯತೆಯಿದೆ ಮತ್ತು ಒಟ್ಟು ಮಾರುಟಕ್ಟೆ ಭಾವನೆಯನ್ನು ಇನ್ನಷ್ಟು ಕುಗ್ಗಿಸಲಿದೆ.
ಅಮೆರಿಕದ ಫೆಡರಲ್ ನೀತಿ
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪಾವೆಲ್ ಅವರು, "ಹಣದುಬ್ಬರ ನಿರೀಕ್ಷಿಸಿದಷ್ಟು ಕಡಿಮೆಯಾಗಿಲ್ಲ. ಹೀಗಾಗಿ, ಕೇಂದ್ರ ಬ್ಯಾಂಕ್ ಬಡ್ಡಿ ದರಗಳನ್ನು ಸ್ಥಿರವಾಗಿಡಲು ಆಯ್ಕೆ ಮಾಡಿಕೊಂಡಿದೆ" ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದಲಾಗುತ್ತಿರುವ ಸುಂಕದ ನಿಲುವಿಗೆ ಸಂಬಂಧಿಸಿದ ನೀತಿ ಅನಿಶ್ಚಿತತೆ ಹಣದುಬ್ಬರಕ್ಕೆ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ಫೆಡರಲ್ ರಿಸರ್ವ್ ತನ್ನ ಮಾನದಂಡ ನೀತಿಯಲ್ಲಿ ಬಡ್ಡಿ ದರವನ್ನು ಶೇ. 3.50-3.75 ರಲ್ಲಿ ಬದಲಾಗದೆ ಉಳಿಸಿಕೊಂಡಿದೆ. ದೃಢವಾದ ಹಣದುಬ್ಬರ, ಸ್ಥಿರ ನಿರುದ್ಯೋಗ ಮಟ್ಟ ಮತ್ತು ವರ್ಷದಲ್ಲಿ ಕೇವಲ ಒಂದು ದರ ಕಡಿತದ ನಿರೀಕ್ಷೆಗಳನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾರಾಟ ಮುಂದುವರಿಸಿದ ವಿದೇಶಿ ಹೂಡಿಕೆದಾರರು
ವಿದೇಶಿ ಸಂಸ್ಥೆಗಳ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ. ಬುಧವಾರ 2,714 ಕೋಟಿ ರೂ. ಮೌಲ್ಯದ ಷೇರುಗಳನ್ನು ವಿದೇಶಿ ಮಾರಾಟಗಾರರು ಮಾರಿದ್ದಾರೆ. 14ನೇ ಬಾರಿಗೆ ನೇರ ಹೊರಹರಿವಿನ ಅವಧಿಯನ್ನು ನಮೂದಿಸಿದೆ. ಇತ್ತೀಚೆಗಿನ ಇಂತಹ ಹೊರಹರಿವಿನ ಪ್ರವೃತ್ತಿ ಒಟ್ಟು ಮಾರುಕಟ್ಟೆಯ ಭಾವನೆ ಮೇಲೆ ಪರಿಣಾಮ ಬೀರುತ್ತಿದೆ.

