ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ₹3,034 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಮುಂಬೈನಲ್ಲಿರುವ ಒಂದು ಫ್ಲಾಟ್ ಸೇರಿದಂತೆ ಅವರ ಸಮೂಹ ಕಂಪನಿಗಳ ಇತರ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತನಿಖಾ ಸಂಸ್ಥೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತಾತ್ಕಾಲಿಕ ಆದೇಶಗಳನ್ನು ಹೊರಡಿಸಿದೆ ಎಂದು ತಿಳಿದುಬಂದಿದೆ.
ಖಂಡಾಲಾದಲ್ಲಿರುವ ಒಂದು ಫಾರ್ಮ್ಹೌಸ್, ಮಹಾರಾಷ್ಟ್ರದ ಒಂದು ಗಿರಿಧಾಮ, ಸನಂದ್ನ(ಅಹಮದಾಬಾದ್) ಜಮೀನುಗಳು ಮತ್ತು ಆರ್-ಇನ್ಫ್ರಾದ ₹7.71 ಕೋಟಿ ಷೇರುಗಳನ್ನೂ ಮುಟ್ಟುಗೋಳು ಹಾಕಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಮುಟ್ಟುಗೋಲು ಹಾಕಿಕೊಂಡ ಈವರೆಗಿನ ಆಸ್ತಿಯ ಒಟ್ಟು ಮೌಲ್ಯ ₹19,344 ಕೋಟಿ ಆಗಿದೆ.

