HEALTH TIPS

ಮಂಜೇಶ್ವರ ಪೋಲೀಸ್ ಠಾಣೆ ಸಮೀಪ ನಿಲ್ಲಿಸಿದ್ದ 30ರಷ್ಟು ವಾಹನಗಳು ಬೆಂಕಿಗಾಹುತಿ

ಮಂಜೇಶ್ವರ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೋಲೀಸರು ವಶಪಡಿಸಿ ಮಂಜೇಶ್ವರ ಠಾಣಾ ವಠಾರದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಗಾಹುತಿ ಯಾಗಿದೆ.  ಕಾರು, ಆಟೋ ರಿಕ್ಷಾ, ಗೂಡ್ಸ್ ಆಟೋ ಸೇರಿದಂತೆ ಸುಮಾರು 30ರಷ್ಟು ವಾಹನಗಳು ಹಾನಿಗೀಡಾಗಿದೆ..

ಕಳೆದ ಹಲವು ಕಾಲದಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ವಶಪಡಿಸಿದ ವಾಹನಗಳನ್ನು ಪೆÇಲೀಸ್ ಠಾಣೆಯ ಸುಮಾರು ನೂರು ಮೀಟರ್ ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ವಾಹನಗಳಿದ್ದ ಸ್ಥಳದಿಂದ ಹೊಗೆ ಕಾಣಿಸಿದ್ದು, ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಬೆಂಕಿ ವ್ಯಾಪಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಎಸ್‍ಐ ವೈಷ್ಣವ್ ರಾಮಚಂದ್ರನ್ ನೇತೃತ್ವದ ಪೆÇಲೀಸರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ಶಮನಗೊಳಿಸಿದ್ದಾರೆ. ಅಷ್ಟರೊಳಗೆ ಹಲವು ವಾಹನಗಳು ಉರಿದು ನಾಶಗೊಂಡಿವೆ. ವಾಹನಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಒಣಗಿದ್ದ ಹುಲ್ಲುಗಾವಲಿಗೆ ಯಾರೋ ಬೀಡಿ ಅಥವಾ ಸಿಗರೇಟ್ ಸೇದಿ ಎಸೆದ ಪರಿಣಾಮ ಬೆಂಕಿ ಹತ್ತಿಕೊಂಡಿರಬೇಕೆಂದು ಸಂಶಯಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries