ಕಾಸರಗೋಡು: ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ವಿಧಾನಸಭಾ ಮಟ್ಟದಲ್ಲಿ ಮಾಸ್ಟರ್ ತರಬೇತುದಾರರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ವಿ. ಶ್ರುತಿ ಉದ್ಘಾಟಿಸಿದರು. ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಸ್ಟರ್ ತರಬೇತುದಾರರಾದ ಪಿ.ಸಜಿತ್ ಕುಮಾರ್, ಕೆ.ಮಧು, ಎಂ.ವಲ್ಸನ್ ತರಬೇತಿಯ ನೇತೃತ್ವ ವಹಿಸಿದ್ದರು. ಚುನಾವಣಾಧಿಕಾರಿಗಳಾದ ವಿ.ಪಿ. ರಘುಮಣಿ, ಬಿನು ಜೋಸೆಫ್, ಲಿಪು ಎಸ್.ಲಾರೆನ್ಸ್, ಕೆ.ಆರ್. ಮನೋಜ್, ವಿ.ಇ. ಶೆರ್ಲಿ, ತರಬೇತಿ ನೋಡಲ್ ಅಧಿಕಾರಿ ಕೆ.ಬಿ. ರಾಮು ಉಪಸ್ಥೀತರಿದದರು.
ನಾಯನ್‍ಮರ್‍ಮೂಲೆ ಟಿಐಎಚ್‍ಎಸ್‍ಎಸ್‍ನಲ್ಲಿ ಸೂಕ್ಷ್ಮ ವೀಕ್ಷಕರು, ಎಣಿಕೆ ಅಧೀಕ್ಷಕರು, ಎಣಿಕೆ ಸಹಾಯಕ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮೊದಲ ಹಂತದ ತರಬೇತಿ ನಡೆಯಿತು. ಮಂಜೇಶ್ವರ, ಕಾಸರಗೋಡು ಮತ್ತು ಉದುಮ ಕ್ಷೇತ್ರಗಳ ಮತ ಎಣಿಕೆ ಕಾಸರಗೋಡು ಸರ್ಕಾರಿ ಕಾಲೇಜಿನ ವಿವಿಧ ಸಭಾಂಗಣಗಳಲ್ಲಿ ನಡೆಯಲಿದೆ. ಕಾಞಂಗಾಡು ಮತ್ತು ತ್ರಿಕರಿಪುರ ಕ್ಷೇತ್ರಗಳ ಮತ ಎಣಿಕೆಗಾಗಿ ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.



