HEALTH TIPS

ಕಾಸರಗೋಡು ಜಿಲ್ಲಾ ಕುಲಾಲ ಸಂಘದ 42 ನೇ ವಾರ್ಷಿಕೋತ್ಸವ, ಮಹಾಸಭೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ 42ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆ ಇತ್ತೀಚೆಗೆ ಕುಂಜತ್ತೂರು ತೂಮಿನಾಡಿನ ಜಿಲ್ಲಾ ಕುಲಾಲ ಸಮುದಾಯದ ಭವನದಲ್ಲಿ ಜರಗಿತು. ಬೆಳಗ್ಗೆ 7.30ರಿಂದ ಗಣಹೋಮ, ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ರಕ್ಷಿತಾ ತೂಮಿನಾಡು ಮತ್ತು ಭುವಿ ಅವರ ಪ್ರಾಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದ್ದು, ದೀಪ ಪ್ರಜ್ವಲನೆ ಮತ್ತು ಉದ್ಘಾಟನೆ ಯನ್ನು ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯದ ಸಭಾ ರಾಜ್ಯ ಅಧ್ಯಕ್ಷ ರಾಜೇಶ್ ಪಾಲಂಗಾಟ್ ನೇರವೇರಿಸಿದರು.  ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್   ರಾಷ್ಟ್ರೀಯ ಕಾರ್ಯಧ್ಯಕ್ಷ ಡಾ.ಎಂ.ಪಿ.ವರ್ಷ ಮೈಸೂರು ಪ್ರಧಾನ ಭಾಷಣ ಮಾಡಿದರು. ಕಮಲಾಕ್ಷಿ ವಿ. ಕುಲಾಲ್, ಕೆ. ಭಾಸ್ಕರನ್, ಕೆ. ವಿಜಯನ್, ಕೆ. ಜಿತೇಶ್ ಕುಮಾರ್ ಕಾಸರಗೋಡು, ದಯಾನಂದ ಮುಜಂಗಾವು, ರವೀಂದ್ರ ಸಾಲಿಯಾನ್, ಸುಜಿತ್ ಕೊಂಚಾಡಿ, ಚಂಚಲಾ ಎ., ಕೊರಗಪ್ಪ ಜೆ. ಬಂಜನ್, ಹೂವಯ್ಯ ನೂಜಿ ಮುಖ್ಯ ಅತಿಥಿಗಳಾಗಿ  ಶುಭ ಹಾರೈಸಿದರು. ಜಿಲ್ಲಾ ಕುಲಾಲ ಸಮುದಾಯದ ಭವನ ಕಟ್ಟಡ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಪದವು ಹಾಗೂ 10 ಕುಲಾಲ ಪಂಚಾಯತಿ ಶಾಖೆಗಳ ಅಧ್ಯಕ್ಷರು ಗೌರವ ಉಪಸ್ಥಿತರಿದ್ದರು.  


ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾಸರಗೋಡು ಜಿಲ್ಲಾ ಕುಲಾಲ ಸಾಧಕ ಪ್ರಶಸ್ತಿ 2026 ರನ್ನು ಪ್ರಧಾನ ಮಾಡಲಾಯಿತು. ಪ್ರಗತಿಪರ ಕೃಷಿಕರಾದ ಸೇಸಮ್ಮ ನಾರಾಯಣ ಮೂಲ್ಯ ಮುನ್ನಿಪ್ಪಾಡಿ, ಶ್ರೀನಿವಾಸ ಮೂಲ್ಯ ಹೇರೂರು, ಕೆ. ಸೀತಾರಾಮ ಕುಲಾಲ್ ಕಣ್ವತೀರ್ಥ, ಯುವ ಕೃಷಿಕ ರಾಮ ತುಳುವನ ಉಪ್ಪಿನೆ, ಶಿಕ್ಷಣ ರಂಗದಲ್ಲಿ ಲೀಲಾ ಟೀಚರ್ ಪೆರ್ಮುದೆ, ಕೃಷ್ಣ ಎನ್ ನೆಲ್ಲಿಕಳಯ, ಸಹಕಾರಿ ಕ್ಷೇತ್ರದಲ್ಲಿ ರಾಮಚಂದ್ರ ಬಡಾಜೆ, ಮಿಲಿಟರಿ ಸೇವೆಗಾಗಿ ಮೋಹನ ಕಡಂಬಾರು, ಕಂಬಳ ಕ್ಷೇತ್ರದಲ್ಲಿ ಚಂದ್ರಹಾಸ ಅಡಕಳ, ಪತ್ರಿಕಾ ಮಾಧ್ಯಮದಲ್ಲಿ ಸತೀಶ್ ದೈಗೋಳಿ, ಪಿಹೆಚ್.ಡಿ ಪುರಸ್ಕøತರು ಸಂಶೋಧಕ ಡಾ. ಆನಂದ ಎಂ ಕಿದೂರು, ಯಕ್ಷಗಾನ ರಂಗದಲ್ಲಿ ಸಂದೀಪ್ ಕೋಳ್ಯೂರು, ಕಲಾ ರಂಗದಲ್ಲಿ ಚಂದ್ರಶೇಖರ್ ಸಾಯ ಬೇಡಗುಡ್ಡೆ, ಮಾ. ಸುದೀಪ್ ಮೀಯಪದವು, ಕ್ರೀಡಾ ಕ್ಷೇತ್ರದಲ್ಲಿ ಕು. ನಮಿತಾ ಕೆ.ಜಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ವಿದ್ಯಾರ್ಥಿನಿಯರಾದ ಸ್ವಾತಿ ತೂಮಿನಾಡು, ವರ್ಷ ಎಂ, ಭುವಿ, ಜೀಕ್ಷಾ ಕಳತ್ತೂರು, ರಶ್ಮಿತಾ, ಶರಣ್ಯ, ಯಶಸ್ವಿನಿ, ಪ್ರಜ್ಞ ವಾಚಿಸಿದರು. ಜಿಲ್ಲಾ ಸಂಘದ ಆಶ್ರಯದಲ್ಲಿ ಚಿಕಿತ್ಸೆಗಾಗಿ ನೀಡುವ ಕುಲಾಲ ಆಸರೆ ಸೇವಾ ಸಹಾಯ ಹಸ್ತದ 15ನೇ ಯೋಜನೆಯ ಚೆಕ್ ನ್ನು ಎಣ್ಮಕಜೆ ಪಂಚಾಯತಿ ಪರ್ಪಕರಿಯದ ಸತೀಶ್ ಕುಲಾಲ್ ಅವರಿಗೆ ಹಾಗೂ 16 ನೇ ಯೋಜನೆಯ ಚೆಕ್ ನ್ನು ವರ್ಕಾಡಿ ಪಂಚಾಯತಿ ಆಸನಬೈಲ್ ನ ಮಾಧವ ಕುಲಾಲ್ ಅವರಿಗೆ ಹಸ್ತಾಂತರಿಸಲಾಯಿತು. 2025 ರ ಸಾಲಿನಲ್ಲಿ ಕೇರಳ ತ್ರಿಸ್ತರ ಚುನಾವಣೆಯಲ್ಲಿ ವಿಜೇತರಾದ ಕುಲಾಲ ಸಮಾಜದ ಬಂಧುಗಳಾದ ಕಮಲಾಕ್ಷಿ ವಿ. ಕುಲಾಲ್ ವರ್ಕಾಡಿ, ಶಾಂತಕುಮಾರಿ ಬೋಳಂತಕೋಡಿ, ಲತೇಶ್ ಕೆ ಮಜಿಬೈಲ್ ಮೀಂಜ, ಗೋಪಾಲಕೃಷ್ಣ ಪಜ್ವ ವರ್ಕಾಡಿ, ಮಾಲತಿ ಕೆ. ವರ್ಕಾಡಿ, ಗಾಯತ್ರಿ ರವೀಂದ್ರ ಕಾಯರಡ್ಕ ವರ್ಕಾಡಿ, ಚಂದ್ರಶೇಖರ ಗುಡ್ಡಲಕೋಡಿ ವರ್ಕಾಡಿ, ಐತಪ್ಪ ಕುಲಾಲ್ ನಲ್ಕ ಎಣ್ಮಕಜೆ, ವಿಜಯ ಕುಲಾಲ್ ಎಣ್ಮಕಜೆ, ಜಗದೀಶ್ ಎಣ್ಮಕಜೆ, ಪುಷ್ಪಲತಾ ಪುತ್ತಿಗೆ, ಮಹೇಶ್ ಅಜ್ಜಿಮೂಲೆ ಕುಂಬ್ದಾಜೆ, ಸೀತಾ ಭಾಸ್ಕರ್ ತಚ್ಚಣಿ. ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾಸರಗೋಡು ಜಿಲ್ಲಾ ವ್ಯಾಪ್ತಿಯ 2025-26ರ ಸಾಲಿನ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿರುವ ಒಟ್ಟು 44 ವಿದ್ಯಾರ್ಥಿಗಳಲ್ಲಿ, ಕೇರಳ ಎಸ್.ಎಸ್. ಎಲ್. ಸಿಯ 14, ಕರ್ನಾಟಕ ಎಸ್.ಎಸ್.ಎಲ್.ಸಿಯ 6, ಕೇರಳ /ಕರ್ನಾಟಕ ಸಿ.ಬಿ.ಯಸ್.ಇಯ 5, ಕೇರಳ /ಕರ್ನಾಟಕದ ಪ್ಲಸ್ ಟು ಮತ್ತು ಪಿ. ಯು. ಸಿ ವಿಭಾಗದ 19 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಸುಮಾರು 400 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು. 

ಜಿಲ್ಲಾ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ತಿಲು ವಂದಿಸಿದರು. ನವೀನ್ ಚಿಪ್ಪಾರ್ ಕಾರ್ಯಕ್ರಮ ನಿರೂಪಿಸಿದರು. ಸಹಭೋಜನ ನಂತರ ಕುಲಾಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 42ನೇ ವಾರ್ಷಿಕ ಮಹಾಸಭೆ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries