HEALTH TIPS

ನೀರ್ಚಾಲಿನಲ್ಲಿ ಕನ್ನಡ ಸಾಹಿತ್ಯ-ಸಂಸ್ಕøತಿ ಸಮ್ಮೇಳನ ಸಮಾರೋಪ

ಬದಿಯಡ್ಕ: ಕಾಸರಗೋಡು ಸಹಿತ ಕರಾವಳಿ ಕರ್ನಾಟಕದ ಸಾಧಕ ಶ್ರೇಷ್ಠರ ಯಶೋಗಾಥೆಗಳ ಮರು ಓದುವಿಕೆ ಸ್ಪೂರ್ತಿದಾಯಕವಾದುದು. ಕಾಸರಗೋಡು ಗಡಿನಾಡನ್ನು ಸಾಂಸ್ಕøತಿಕವಾಗಿ ಕರ್ನಾಟಕದೊಂದಿಗೆ ಬೆಸೆಯುವ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ಡಾ.ರಮಾನಂದ ಬನಾರಿ ಪ್ರಮುಖರು. ಅವರ 85ರ ವಸಂತದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಆ ಆಶಯ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಕಸಾಪ ಕೇರಳ ಗಡಿನಾಡ ಘಟಕ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಮತ್ತು ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರ ದೇಲಂಪಾಡಿ, ಕಲಾಕುಂಚ ಕಾಸರಗೋಡು, ಗಿಳಿವಿಂಡು ಮಂಜೇಶ್ವರ, ಸ್ನೇಹರಂಗ ಕಾಸರಗೋಡು ಸಹಿತ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಕವಿ, ವೈದ್ಯ, ಅರ್ಥಧಾರಿ ಡಾ.ರಮಾನಂದ ಬನಾರಿ 85ರ ಅಂಗವಾಗಿ ಕನ್ನಡ ಸಾಹಿತ್ಯ-ಸಂಸ್ಕøತಿ ಸಮ್ಮೇಳನದ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 


ಸಮಾರಂಭದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ರಮಾನಂದ ಬನಾರಿ ಅವರು, ನಾಡಿನ ವಿದ್ವತ್ ಪರಂಪರೆಗೆ ಚಾಲನೆ ಕೊಟ್ಟ ಕೇಂದ್ರ ನೀರ್ಚಾಲು. ನಾವೆಲ್ಲ ಋಣ ತ್ರಯ ಮತ್ತು ಗುಣ ತ್ರಯಗಳನ್ನು ನಂಬಿಕೊಂಡುಬಂದವರು. ಗುಣ ತ್ರಯಗಳು ನಮ್ಮ ಸ್ವಭಾವ, ಸಂಸ್ಕಾರಗಳನ್ನು ನಿರೂಪಿಸುತ್ತದೆ. ಋಣ ತ್ರಯಗಳು ನಮ್ಮ ಕರ್ತವ್ಯಗಳನ್ನು ನಿರ್ದೇಶಿಸುತ್ತದೆ. ಗಳಿಕೆಗಳನ್ನು ಸಮಾಜಕ್ಕೆ ಮರಳಿ ನೀಡುವ ಪ್ರವೃತ್ತಿಯೇ ಬದುಕಿನ ಸಂತೃಪ್ತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಲ್ಪ ಪ್ರಯತ್ನಗಳನ್ನು ಮಾಡಿರುವ ಭಾವವಷ್ಟೇ ತನ್ನದು ಎಂದು ಅವರು ತಿಳಿಸಿದರು.

ಸಮಾರಂಭದ ಉದ್ಘಾಟಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದು ಡಾ.ರಮಾನಂದ ಬನಾರಿ ಸಂಪಾದಕತ್ವದಲ್ಲಿ ಹೊರತಂದ ಕನ್ನಡಿಯಲ್ಲಿ ಕನ್ನಡಿಗ ಕೃತಿಯ 7ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅರ್ಥಧಾರಿಯಾಗಿ ಕಲಾವಿದನಲ್ಲಿ ಇರಬೇಕಾದ ಶಿಸ್ತು, ಭಾಷಾ ಪ್ರೌಢಿಮೆ, ಪುರಾಣ ಪ್ರಜ್ಞೆ ಹಾಗೂ ಅಭಿವ್ಯಕ್ತಿಯ ಸಾಮಥ್ರ್ಯವನ್ನು ಡಾ. ಬನಾರಿ ತಮ್ಮ ಜೀವನ ಮತ್ತು ಕೃತಿಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಪಾತ್ರಗಳು ಅನಗತ್ಯ ಮಾತುಗಳಿಂದ ಕೂಡಿರುವುದಿಲ್ಲ. ಅರ್ಥಧಾರಿಯ ಜವಾಬ್ದಾರಿ ಮತ್ತು ಕಲಾತ್ಮಕತೆಯ ಕುರಿತು ಅವರು ರಚಿಸಿರುವ ಕೃತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.


ಕಿಲ್ಲೆಯವರ ಕರ್ಣನ ಅರ್ಥವ್ಯಾಖ್ಯಾನ ಕೇಳಿ ಭಾವುಕರಾಗದವರೇ ಇಲ್ಲ. ಅದೇ ರೀತಿ ಡಾ. ಬನಾರಿ ಅವರ ಕೃಷ್ಣ ಪಾತ್ರವೂ ಸಂಯಮಿತ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಕಲಾವಿದನು ಎಲ್ಲವನ್ನೂ ಮಾತಿನ ಮೂಲಕವೇ ಹೇಳಬೇಕಾಗಿಲ್ಲ ಎಂಬುದನ್ನು ಅವರು ತಮ್ಮ ಪ್ರದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ ಎ0ದು ಬಿಳಿಮಲೆ ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ್ ಅವರು ಕೃತಿ ಪರಿಚಯ ನೀಡಿ ಮಾತನಾಡಿದರು. ಕನ್ನಡ ಲೇಖಕರ ಸಂಗದ ಜಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ರೈ ಶೇಣಿ, ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಸುಕೇಶ್ ಕೆ., ಪ್ರೊ.ಪಿ.ಎನ್ ಮೂಡಿತ್ತಾಯ ಉಪಸ್ಥಿತರಿದ್ದು ಶುಭಹಾರೈಸಿದರು.

ಕೃತಿಯೊಳಗೆ ಸೇರಿದ ಸಾಧಕರಾದ ಡಾ.ಎಸ್.ಆರ್.ನರಹರಿ, ನೆಟ್ಟಣಿಗೆ ಪುರುಷೋತ್ತಮ ಆಚಾರ್ಯ ಅವರನ್ನು ಗೌರವಿಸಲಾಯಿತು. ಜೊತೆಗೆ ಸಾಧಕರೊಂದಿಗೆ ಸಂವಾದ, ಕಥೆ, ಕವಿತಾ ರಚನೆಯ ಸಹಭಾಗಿಗಳಿಗೆ ಸಂಭಾವನೆ, ಸಾಹಿತಿ ಕಲಾವಿದರಿಗೆ ಅತಿಥಿ ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಡಾ.ಬನಾರಿ ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಚಂದ್ರಶೇಖರ ಏತಡ್ಕ ವಂದಿಸಿದರು. ಕವಿತಾ ಕೂಡ್ಲು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries