ಕಾಸರಗೋಡು: ನಗರದ ಹೊನ್ನಮೂಲೆ ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನವು ನೂತನ ಶಿಲಾಮಯದೊಂದಿಗೆ ನಿರ್ಮಾಣವಾಗುತ್ತಿದ್ದು ಶ್ರೀಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂ.ಮೊತ್ತ ಪ್ರಸಾದ ರೂಪದಲ್ಲಿ ನೀಡಲಾಗಿದೆ. ಮೊತ್ತದ ಡಿ.ಡಿ.ಯನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಯೋಜನಾಧಿಕಾರಿ ದಿನೇಶ್ ಹಸ್ತಾಂತರಿಸಿದರು. ಕ್ಷೇತ್ರ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಕೆ. ಹೊನ್ನಮೂಲೆ, ಅಧ್ಯಕ್ಷ ರೋಹಿತಾಕ್ಷ ಕೆ. ನಾಗರಕಟ್ಟೆ, ಕಾರ್ಯದರ್ಶಿ ರಾಜೇಶ್ ಎಸ್.ರಾವ್, ಕೋಶಾಧಿಕಾರಿ ಶ್ರೀ ರಾಧಾಕೃಷ್ಣ ಹೊನ್ನಮೂಲೆ ಡಿ.ಡಿ ಸ್ವೀಕರಿಸಿದರು.
ಕಾಸರಗೋಡು ನಗರಸಭೆ ಸದಸ್ಯೆ ದಿವ್ಯಾ ಸಂದೀಪ್ ನಾಗರಕಟ್ಟೆ, ಕಾಸರಗೋಡಿನ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ವಲಯ ಮೆಲ್ವಿಚಾರಕ ಗೋಪಲಕೃಷ್ಣ, ಜನ ಜಾಗೃತಿಯ ವಲಯ ಅಧ್ಯಕ್ಷ ಕಿರಣ ಪ್ರಸಾದ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.


